ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ನಾಯಕತ್ವದ ಜೊತೆಗೆ ಟಿಕೆಟ್ ಹಂಚಿಕೆಯಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬುದೇ ಅಂಬರೀಶ್ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಜಿಲ್ಲೆಯಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂಬ ವರಸೆ ಅಂಬರೀಶ್ ರದ್ದು. ಆದರೆ ಈ ಬಾರಿ ಅಂಬರೀಶ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಹೊರತುಪಡಿಸಿ ಮತ್ತೆಲ್ಲ ಟಿಕೆಟ್ ಹಂಚಿಕೆಯು ಕೆಪಿಸಿಸಿ ಸರ್ವೇ ಆಧರಿಸಿಯೇ ನೀಡಲಾಗುತ್ತೆ. ಇದರ ಸುಳಿವು ತಿಳಿದ ಅಂಬರೀಶ್ ಮಂಡ್ಯದಿಂದ ಟಿಕೆಟ್ ಬೇಕು ಎಂದು ಕೆಪಿಸಿಸಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಮಂಡ್ಯದ ಟಿಕೆಟ್ ನನಗಲ್ಲದೆ ಇನ್ಯಾರಿಗೆ ಕೊಡ್ತಾರೆ ಬಿಡ್ರೋ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಮ್ಯಾ, ಎಸ್‍ಎಂ.ಕೃಷ್ಣ ಯಾರೇ ಸ್ಪರ್ಧಿಸಿದ್ರೂ ನನ್ನ ಸ್ಪರ್ಧೆ ಖಚಿತ – ಅಂಬರೀಶ್
Advertisement
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ರಾಜ್ಯದ ಯಾವ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಂಡ್ಯ ಟಿಕೆಟ್ ಅಂಬರೀಶ್ ಗೆ ಅಂತಿಮಪಡಿಸಿ ಮಂಡ್ಯದ ಇತರೆ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮನ್ನು ಸಚಿವ ಸ್ಥಾನದಿಂದ ತೆಗೆದ ನಂತರ ರಾಜ್ಯ ನಾಯಕರೊಂದಿಗೆ ಒಂದು ಹಂತದ ಅಂತರ ಕಾಯ್ದುಕೊಂಡಿದ್ದ ಅಂಬರೀಶ್ ಈಗಲು ಅದೇ ವರಸೆ ಮುಂದುವರಿಸಿದ್ದಾರೆ. ಬೇಕಾದರೆ ಮಂಡ್ಯ ಟಿಕೆಟನ್ನ ನನ್ನ ಮನೆಗೆ ತಂದುಕೊಡಲಿ ಆಗ ಸ್ಪರ್ಧೆ ಮಾಡ್ತೀನಿ ಎಂಬಂತೆ ಮಾತನಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದು ಸ್ಪರ್ಧೆ ಮಾಡಿದ್ರೂ ಓಕೆ: ಅಂಬರೀಶ್
Advertisement
ಸ್ಟಾರ್ ಕ್ಯಾಂಪೇನರ್ ಕೂಡ ಆಗಿರುವ ಅಂಬರೀಶ್ ವರಸೆ ಕಾಂಗ್ರೆಸ್ ನಾಯಕರಿಗೂ ತಲೇ ನೋವು ತಂದಿದ್ದು. ರಾಜ್ಯ ಕಾಂಗ್ರೆಸ್ ನಾಯಕರು ಸಹಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.