Connect with us

Bengaluru City

ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದು ಸ್ಪರ್ಧೆ ಮಾಡಿದ್ರೂ ಓಕೆ: ಅಂಬರೀಶ್

Published

on

Share this

ಬೆಂಗಳೂರು: ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದರೂ ಓಕೆ. ಪಕ್ಷ ಟಿಕೆಟ್ ಕೊಟ್ಟರೆ ನಾನು ಸ್ಪರ್ಧೆ ಮಾಡುತ್ತೇನೆ. ಆದರೆ ರಾಜಕೀಯಕ್ಕೆ ನನ್ನ ಪತ್ನಿ ಮತ್ತು ಮಗನನ್ನು ಕರೆ ತರಲ್ಲ ಎಂದು ಅಂಬರೀಶ್ ಹೇಳಿದ್ದಾರೆ.

ರಮ್ಯಾ ರಾಜ್ಯ ರಾಜಕಾರಣಕ್ಕೆ ಮರಳಿ ಬರಬೇಕೆಂದ್ರೆ ಹೈಕಮಾಂಡ್ ನಿಂದ ಅನುಮತಿ ಪಡೆಯಬೇಕು. ಒಂದು ವೇಳೆ ರಮ್ಯಾ ಮಂಡ್ಯಕ್ಕೆ ಬಂದರೆ ಸ್ವಾಗತ. ಪಕ್ಷ ಬಿಡುವ ಯಾವುದೇ ಉದ್ದೇಶ ನನಗಿಲ್ಲ. ಒಂದು ವೇಳೆ ರಮ್ಯಾರಿಗೆ ಟಿಕೆಟ್ ನೀಡಿದರೆ ಅವರ ಪ್ರಚಾರ ಮಾಡ್ತೀರಾ ಎಂಬ ಪ್ರಶ್ನೆಗೆ ಅದು ಪಕ್ಷದ ಕೆಲಸ ಹಾಗಾಗಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಉತ್ತರಿಸಿದರು.

ಗುಟ್ಟು ಬಿಟ್ಟು ಕೊಡಲಿಲ್ಲ: ಶಾಸಕರಾದ ಮೇಲೆ ಸಣ್ಣ ಪುಟ್ಟ ಕೆಲಸಗಳು ಇರುತ್ತೇವೆ. ಹಾಗಾಗಿ ಸಿಎಂ ನಿವಾಸಕ್ಕೆ ಬಂದಿದ್ದು, ಶಾಸಕರಾದರೆ ಸಿಎಂ ಮನೆಗೆ ಬರಲೇ ಬಾರದ ಅಂತಾ ಮರು ಪ್ರಶ್ನೆ ಹಾಕಿದರು. ಕೇವಲ ಮಂಡ್ಯದಲ್ಲಿ ಮಾತ್ರ ರಾಜಕೀಯ ನಡೆಯುತ್ತಿಲ್ಲ. ಇಡೀ ಭಾರತದ ತುಂಬೆಲ್ಲಾ ರಾಜಕೀಯ ನಡೆಯುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವ ಹಾಗೇ ಕಾಂಗ್ರೆಸ್ ಪ್ರವೃತ್ತಿ ಎಂದರೆ ಹೈಕಮಾಂಡ್ ಪ್ರವೃತ್ತಿ. ಪಕ್ಷದ ಅಧ್ಯಕ್ಷರೇ ಕೊರಟಗೆರೆ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಮಾತ್ರ ನಿಲ್ಲೋದು, ಇಲ್ಲಾ ಅಂದ್ರೆ ಸ್ಪರ್ಧೆ ಮಾಡಲ್ಲ ಅಂತಾ ಹೇಳಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿ ನಾಯಕರನ್ನು ಭೇಟಿ ಆಗುತ್ತಿರುತ್ತೇನೆ. ಅವರೊಂದಿಗೆ ಸಂಜೆ ಊಟವು ಮಾಡುತ್ತೇನೆ. ಯಾರೂ ನನ್ನನ್ನು ತಮ್ಮ ಪಕ್ಷಕ್ಕೆ ಆಹ್ವಾನ ಮಾಡಿಲ್ಲ ಎಂದು ಅಂಬರೀಶ್ ಸ್ಪಷ್ಟನೆ ನೀಡಿದರು.

https://www.youtube.com/watch?v=QxHvyneQsfU

Click to comment

Leave a Reply

Your email address will not be published. Required fields are marked *

Advertisement