ಗುವಾಹಟಿ: ಶಿವಸೇನೆ ಪಕ್ಷದ ಉಳಿವಿಗಾಗಿ ಅಸ್ವಾಭಾವಿಕ ಮೈತ್ರಿಯಿಂದ ಹೊರಬರುವುದು ಅನಿವಾರ್ಯವಾಗಿದೆ ಎಂದು ಶಿವಸೇನೆ ಬಂಡಾಯ ಶಾಸಕ ಏಕನಾಥ್ ಶಿಂಧೆ ತಿಳಿಸಿದರು.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರದಿಂದ ಕೇವಲ ಘಟಕ ಪಕ್ಷಗಳಿಗೆ ಮಾತ್ರ ಲಾಭವಾಗಿದೆ. ಅಘಡಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಈ ಬಗ್ಗೆ ನಮಗೆ ತೀವ್ರ ಅಸಮಾಧಾನ ಇದೆ ಎಂದು ತಿಳಿಸಿದರು.
Advertisement
Advertisement
ಕಳೆದ ಎರಡೂವರೆ ವರ್ಷಗಳಲ್ಲಿ ಎಂವಿಎ ಸರ್ಕಾರದಿಂದ ಕೇವಲ ಘಟಕ ಪಕ್ಷಗಳಿಗೆ ಲಾಭವಾಗಿದೆ. ಪಕ್ಷದ ಉಳಿವಿಗಾಗಿ ಅಸಹಜ ಮೈತ್ರಿಯಿಂದ ಹೊರಬರುವುದು ಅತ್ಯಗತ್ಯವಾಗಿದೆ. ಮಹಾರಾಷ್ಟ್ರದ ಹಿತದೃಷ್ಟಿಯಿಂದ ಈಗಿನಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
Advertisement
१. गेल्या अडीच वर्षात म.वि.आ. सरकारचा फायदा फक्त घटक पक्षांना झाला,आणि शिवसैनिक भरडला गेला.
२. घटक पक्ष मजबूत होत असताना शिवसैनिकांचे – शिवसेनेचे मात्र पद्धतशीर खच्चीकरण होत आहे. #HindutvaForever
— Eknath Shinde – एकनाथ शिंदे (@mieknathshinde) June 22, 2022
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಫೇಸ್‍ಬುಕ್ ವಿಳಾಸದಲ್ಲಿ ಬಂಡಾಯ ಶಾಸಕರು ಮುಂದೆ ಬಂದರೆ ಮತ್ತು ಅವರ ಮೇಲೆ ನಂಬಿಕೆ ಇಲ್ಲ ಎಂದು ಮುಖದ ಮೇಲೆ ಹೇಳಿದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ ಸ್ವಲ್ಪ ಸಮಯದ ನಂತರ ಈ ಹೇಳಿಕೆ ನೀಡಿದ್ದಾರೆ.
Advertisement
ತಾವು ಬಿಜೆಪಿ ಸೇರೋದಿಲ್ಲ. ಶಿವಸೇನೆಯಿಂದಲೂ ಹೊರ ಬರಲ್ಲ. ನಾವು ಬಾಳಾ ಠಾಕ್ರೆಯವರ ಅನುಯಾಯಿಗಳು. ಅವರ ಸಿದ್ಧಂತವನ್ನು ನಾವು ಅನುಸರಿಸ್ತಿದ್ದೇವೆ. ನಮಗೆ ಅಘಡಿ ಸರ್ಕಾರದ ಭಾಗವಾಗಿರಲು ಇಷ್ಟ ಇಲ್ಲ. ನೀವು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುತ್ತೇವೆ ಎಂದು ಹೇಳಿದಲ್ಲಿ ನಾವು ಶಿವಸೇನೆಯಲ್ಲಿಯೇ ಇರುತ್ತೇವೆ. ನಿಮ್ಮ ಜೊತೆಗೆ ಬರುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಶಿಂಧೆ ಮಾಡಿದ್ದು ಸರಿಯಲ್ಲ, ಎಂದಿಗೂ ಶಿವಸೇನೆ ವಿಭಜನೆಯಾಗಲ್ಲ- ಸಿಎಂ ನಿವಾಸದ ಎದುರು ಕಾರ್ಯಕರ್ತರು ಕಣ್ಣೀರು
ಪಕ್ಷದ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ಅವರು ಆರರಿಂದ ಏಳು ಸ್ವತಂತ್ರ ಶಾಸಕರು ಸೇರಿದಂತೆ 46 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಎಂದು ಇಂದು ಹೇಳಿಕೊಂಡ ನಂತರ ಶಿವಸೇನೆಯಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ಸಿಎಂ ಉದ್ಧವ್ ಠಾಕ್ರೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ವಿಪ್ ಜಾರಿ ಮಾಡಿದ್ದರು. ಆದರೆ ರೆಬೆಲ್ ಶಾಸಕರು ಜಪ್ಪಯ್ಯ ಎನ್ನಲಿಲ್ಲ. ಬದಲಿಗೆ ಈ ವಿಪ್‍ಗೆ ಕಿಮ್ಮತಿಲ್ಲ ಎಂದು ಏಕ್‍ನಾಥ್ ಶಿಂಧೆ ಟ್ವೀಟ್ ಮಾಡಿದ್ದರು. ಇನ್ನು, ಏಕ್‍ನಾಥ್ ಶಿಂಧೆ ಅವರೇ ಶಿವಸೇನೆಯ ಶಾಸಕಾಂಗ ಪಕ್ಷ ನಾಯಕರು ಎಂದು 34 ರೆಬೆಲ್ ಶಾಸಕರು ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಉದ್ಧವ್ ಠಾಕ್ರೆ