ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಈ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸದ ಮುಂದೆ ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ.
Mumbai | Shiv Sena will never split. We stand behind Uddhav ji. What Eknath Shinde has done is not right, says an emotional Shiv Sena worker outside Maharashtra CM's official residence. pic.twitter.com/hvPwdmC4p0
— ANI (@ANI) June 22, 2022
Advertisement
ಶಿವಸೇನೆ ಎಂದಿಗೂ ವಿಭಜನೆಯಾಗುವುದಿಲ್ಲ. ನಾವು ಉದ್ಧವ್ ಠಾಕ್ರೆ ಪರ ನಿಂತಿದ್ದೇವೆ. ಏಕನಾಥ್ ಶಿಂಧೆ ಮಾಡಿದ್ದು ಸರಿಯಲ್ಲ ಎಂದು ಶಿವಸೇನೆ ಕಾರ್ಯಕರ್ತರೊಬ್ಬರು ಭಾವುಕರಾಗಿದ್ದಾರೆ. ಇತ್ತ ಶಿವಸೇನೆಯ ಮುಖಂಡ ಸಂಜಯ್ ರಾವತ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಉದ್ಧವ್ ಠಾಕ್ರೆ ಅವರೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ತಿಳಿಸಿದ್ದಾರೆ.
Advertisement
Four more rebel MLAs reached at a hotel in Assam's Guwahati.
— ANI (@ANI) June 22, 2022
Advertisement
ಶಿವಸೇನೆಯ ರೆಬೆಲ್ ಶಾಸಕ ಏಕನಾಥ್ ಶಿಂಧೆ ತಮ್ಮ ಶಾಸಕರ ಜೊತೆ ಅಸ್ಸಾಂನ ಗುವಾಹಟಿಯಲ್ಲಿರುವ ಹೋಟೆಲೊಂದರಲ್ಲಿ ಇದ್ದಾರೆ. ಈಗಾಗಲೇ ಅಲ್ಲಿರುವ ಶಾಸಕರ ಜೊತೆ ಇದೀಗ ಮತ್ತೆ ನಾಲ್ವರು ಶಾಸಕರು ಸೇರಿಕೊಂಡಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಬೊಮ್ಮಾಯಿಗೆ ನಿರ್ಧಾರ ತೆಗೆದುಕೊಳ್ಳೋ ಧೈರ್ಯವಿಲ್ಲ: ಮುಖ್ಯಮಂತ್ರಿ ಚಂದ್ರು
Advertisement
Mumbai | Uddhav Thackeray is Maharashtra Chief Minister and he will remain the CM, says Shiv Sena leader Sanjay Raut. pic.twitter.com/ZDQLIsaSmC
— ANI (@ANI) June 22, 2022
ಒಟ್ಟಿನಲ್ಲಿ ಶಿವಸೇನಾ ಶಾಸಕ ಮತ್ತು ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ತಮಗೆ 40 ಶಾಸಕರ ಬೆಂಬಲ ಇದೆ ಎಂದು ತಿಳಿಸಿರುವುದು ಮಹಾರಾಷ್ಟ್ರದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿ ಸರ್ಕಾರಕ್ಕೆ ಇದೀಗ ಸಂಕಷ್ಟ ಬಂದಿದ್ದು, ಈ ಹಿನ್ನೆಲೆ ನಿನ್ನೆಯಿಂದ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಂಜಯ್ ರಾವತ್ ಟ್ವೀಟ್ ಮಾಡಿ, ವಿಧಾನಸಭೆ ವಿಸರ್ಜನೆಯತ್ತ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಪಯಣ ಎಂದು ಬರೆದಿದ್ದರು. ಈ ಮೂಲಕ ಶಾಸಕಾಂಗ ಸಭೆಯನ್ನು ವಿಸರ್ಜಿಸುವ ಬಗ್ಗೆ ಸುಳಿವು ಕೊಟ್ಟಿದ್ದರು.
#WATCH | Maharashtra CM Uddhav Thackeray comes out to greet his supporters after his meeting with NCP chief Sharad Pawar and Supriya Sule at his residence in Mumbai pic.twitter.com/dXTCO53YNa
— ANI (@ANI) June 22, 2022
ಅಲ್ಲದೆ ಸಿಎಂ ಉದ್ಧವ್ ಠಾಕ್ರೆ ಕೂಡ ರಾಜೀನಾಮೆಯ ಸುಳಿವು ಕೊಟ್ಟಿದ್ದರು. ಸಿಎಂ ಹುದ್ದೆಗಳು ಬರುತ್ತವೆ, ಹೋಗುತ್ತವೆ. ಆದರೆ ಜನರ ಪ್ರೀತಿಯೇ ನಿಜವಾದ ಆಸ್ತಿ. ಕಳೆದ 2 ವರ್ಷಗಳಲ್ಲಿ ಜನರಿಂದ ಅಪಾರ ಪ್ರೀತಿಯನ್ನು ಪಡೆಯುವ ಭಾಗ್ಯ ನನಗಿದೆ. ಇದು ಸಂಖ್ಯೆಗಳ ಬಗ್ಗೆ ಅಲ್ಲ. ಒಬ್ಬ ಶಾಸಕನಾದರೂ ನನ್ನ ವಿರುದ್ಧ ಇದ್ದರೆ ಅದು ನನಗೆ ನಾಚಿಕೆಗೇಡಿನ ಸಂಗತಿ. ಇದರಿಂದಾಗಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದಿದ್ದರು.