ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

Public TV
1 Min Read
FotoJet 79

ಇಂದು ರಾಜ್ಯಾದ್ಯಂತ ಅಂಬಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ನಮನ ಸಲ್ಲಿಸಿದರು. ನಂತರ ಅಂಬರೀಶ್ ಅವರ ಹುಟ್ಟೂರಿಗೂ ಸುಮಲತಾ ಅಂಬರೀಶ್ ತೆರಳಿದರು. ಇದನ್ನೂ ಓದಿ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಸಾರಥಿ ಭಾ.ಮಾ. ಹರೀಶ್

FotoJet 2 44

ಅಂಬರೀಶ್ ಅವರ ಹುಟ್ಟು ಹಬ್ಬಕ್ಕಾಗಿಯೇ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಾಗಿ ವಿಶೇಷ  ಡಿಪಿ ಬಿಡುಗಡೆ ಮಾಡುತ್ತಿದ್ದರು. ಅದನ್ನು ಸುಮಲತಾ ಸೇರಿದಂತೆ ಅನೇಕರು ಹಂಚಿಕೊಂಡಿದ್ದಾರೆ. ಅಲ್ಲದೇ, ಅಂಬರೀಶ್ ಗಾಗಿ ವಿಶೇಷ ಕವಿತೆಯನ್ನು ಸಮಲತಾ ಬರೆದುಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

FotoJet 3 29

ಅಂಬರೀಶ್ ಅವರನ್ನು ಆಕಾಶಕ್ಕೆ ಹೋಲಿಸಿರುವ ಸುಮಲತಾ ಅಂಬರೀಶ್, ಆಕಾಶಕ್ಕೆ ಅಳತೆಯ ಮಿತಿ ಹೇಗಿಲ್ಲವೋ, ಹಾಗೆಯೇ ಅಂಬರೀಶ್ ಅವರ ಪ್ರೀತಿಗೆ ಯಾವುದೇ ಮಿತಿ  ಇರಲಿಲ್ಲ. ಹಾಗಾಗಿ ಅವರು ಆಕಾಶದ ಒಡೆಯ ಅನಿಸಿಕೊಂಡಿದ್ದರು. ನೀವು ನನ್ನಲ್ಲಿ ಅಸಂಖ್ಯಾತ ನೆನಪುಗಳನ್ನು ಬಿಟ್ಟು ಹೋಗಿದ್ದೀರಿ. ಈ ಜೀವನಕ್ಕೆ ಸಾಕಾಗಷ್ಟು ಪ್ರೀತಿ ಕೊಟ್ಟಿದ್ದೀರಿ. 70 ವಯಸ್ಸು ಅನ್ನುವುದು ಅಂಬಿ ಎಂಬ ಮೇರು ವ್ಯಕ್ತಿತ್ವದ ಮುಂದೆ ಸಣ್ಣ ಸಂಖ್ಯೆ. ನೀವು ನಮ್ಮಲ್ಲಿ ಶಾಶ್ವತವಾಗಿ ಇರುವುದರಿಂದ ವಯಸ್ಸು ಅನ್ನುವುದ ಕೇವಲ ಸಂಖ್ಯೆ. ಅಂಬಿ ಅಮರ’  ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

FotoJet 1 47

ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಹೆಸರು ಮಾಡಿರುವ ಅಂಬರೀಶ್ ಅವರಿಗೆ ಆರೋಗ್ಯ ಸಚಿವ ಕೆ.ಸುಧಾಕರ್ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. ಅಲ್ಲದೇ ಸಿನಿಮಾ ರಂಗದ ಅನೇಕ ಕಲಾವಿದರು ಅಂಬರೀಶ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *