ಕೊಲಂಬೊ: ರಾವಣನ ನಾಡು ಎಂಬ ಖ್ಯಾತಿಯ ಶ್ರೀಲಂಕಾ ಮಹಾ ಆರ್ಥಿಕ ಪತನದತ್ತ ಸಾಗಿದೆ. ದೇಶದಲ್ಲಿ ಜನ ಆಹಾರ ಉತ್ಪನ್ನಗಳ ಖರೀದಿಗೆ ಹಾಹಾಕಾರ ಶುರುವಾಗಿದ್ದು, ಸಕ್ಕರೆ, ಬೇಳೆ ಸೇರಿದಂತೆ ಪ್ರಮುಖ ಆಹಾರ ಉತ್ಪನ್ನಗಳಿಗೆ ಚಿನ್ನದ ಬೆಲೆ ಆಗಿದೆ.
Advertisement
ಶ್ರೀಲಂಕಾದಲ್ಲಿ ಜಿಡಿಪಿ ಸೊನ್ನೆ ಸುತ್ತುತ್ತಿದೆ. ಜನ ಪೆಟ್ರೋಲ್, ಸೀಮೆಎಣ್ಣೆಗೆ ಕ್ಯೂ ನಿಂತು ಸಾವನ್ನಪ್ಪುತ್ತಿದ್ದಾರೆ. ಮುದ್ರಣ ಕಾಗದಲ್ಲಿ ಕೊರತೆ ಉಂಟಾದ ಪರಿಣಾಮ ಶಾಲಾ ಮಕ್ಕಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ. ಪೆಟ್ರೋಲ್, ಡೀಸೆಲ್‍ಗಾಗಿ ದಿನಗಟ್ಟಲೇ ಕ್ಯೂ ನಿಂತು ಇಬ್ಬರು ನಾಗರಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ
Advertisement
Advertisement
ರಷ್ಯಾ, ಉಕ್ರೇನ್ ನಡುವೆ ಯುದ್ಧ ಆರಂಭವಾದಗಿನಿಂದ ಶ್ರೀಲಂಕಾದಲ್ಲಿ ತೈಲ ಹಾಹಾಕಾರ ಆರಂಭವಾಗಿದೆ. ನಿನ್ನೆ ಎಪ್ಪತ್ತು ವರ್ಷ ಮೇಲ್ಪಟ್ಟ ಇಬ್ಬರು ವೃದ್ಧರು ಸೀಮೆಎಣ್ಣೆಗಾಗಿ ಕ್ಯೂ ನಿಂತಿದ್ದ ಸ್ಥಳದಲ್ಲೇ ನಿಶ್ಯಕ್ತಿಯಿಂದ ಸಾವನ್ನಪ್ಪಿದ್ದಾರೆ. ಯುದ್ಧ ಬೆನ್ನಲ್ಲೇ ಶ್ರೀಲಂಕಾದಲ್ಲಿ ಕಚ್ಚಾತೈಲ ಸಂಗ್ರಹಗಾರಗಳು ಬರಿದಾಗಿದೆ. ಇತ್ತ ಎಲ್‍ಪಿಜಿ ಬೆಲೆ ಸಿಲಿಂಡರ್ ಬೆಲೆ 1,350 ರೂಪಾಯಿಗೆ ಏರಿಕೆ ಕಂಡಿದೆ. ಬೆಲೆ ಏರಿಕೆಯಿಂದಾಗಿ ಜನ ಹೈರಾಣಾಗಿದ್ದು, ಆರ್ಥಿಕ ದಿವಾಳಿಯತ್ತ ಶ್ರೀಲಂಕಾ ಸಾಗಿದೆ. ಇದನ್ನೂ ಓದಿ: ಚುನಾವಣೆವರಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ
Advertisement
ಶ್ರೀಲಂಕಾದಲ್ಲಿ ದಿನ ಬಳಕೆಯ ವಸ್ತುಗಳೊಂದಿಗೆ ಟೀ ಬೆಲೆ ಕೂಡ ಗಗನಕ್ಕೇರಿದೆ. ಒಂದು ಕಪ್ ಟೀ ಬೆಲೆ 100 ರೂ.ಗೆ ಏರಿಕೆ ಕಂಡಿದೆ. 400 ಗ್ರಾಂನ ಹಾಲಿಗೆ ಪುಡಿಗೆ 250 ರೂಪಾಯಿ ಬೆಲೆ ನಿಗದಿಪಡಿಸಲಾಗಿದ್ದು, ಹಣದುಬ್ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಏರುತ್ತಿದೆ. ಒಂದೇ ತಿಂಗಳಲ್ಲಿ 10% ಹಣದುಬ್ಬರ ಏರಿಕೆ ಕಂಡಿದೆ. ಫೆಬ್ರವರಿಯಲ್ಲಿ 15.1% ರಷ್ಟಿದ್ದ ಹಣದುಬ್ಬರ ಮಾರ್ಚ್‍ನಲ್ಲಿ 25.7%ಗೆ ಏರಿಕೆ ಕಂಡಿದ್ದು, ಡಾಲರ್ ಮುಂದೆ ಶ್ರೀಲಂಕಾದ ಕರೆನ್ಸಿ ಬೆಲೆ ಮಂಕಾಗಿದ್ದು, ಪ್ರತಿ ಡಾಲರ್ ಬೆಲೆ 275 ರೂಪಾಯಿಗೆ ಏರಿಕೆ ಕಂಡಿದೆ.
ಆರ್ಥಿಕ ದಿವಾಳಿಗೆ ಕಾರಣಗಳೇನು:
ಶ್ರೀಲಂಕಾದ ಆರ್ಥಿಕ ದಿವಾಳಿಗೆ ಪ್ರಮುಖ ಕಾರಣವಾಗಿರುವುದು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿರುವುದು ಮತ್ತು ಏಕಾಏಕಿ ರಸಗೊಬ್ಬರ ನಿಷೇಧ ಮಾಡಿರುವುದರಿಂದಾಗಿ ಶ್ರೀಲಂಕಾದ ಕೃಷಿ ವಲಯ ಕುಸಿತ ಕಂಡಿದೆ. ಅಕ್ಕಿ, ಬೆಳೆ, ಕಬ್ಬು ಸೇರಿ ಧಾನ್ಯಗಳ ಪೂರೈಕೆಯಲ್ಲಿ ಭಾರಿ ಕೊರತೆ ಕಂಡುಬಂದಿದ್ದು, ಪೂರೈಕೆ ಕೊರತೆಯಿಂದ ಆಹಾರ ಪದಾರ್ಥಗಳ ಬೆಲೆ ಗಣನೀಯ ಏರಿಕೆ ಕಂಡಿದೆ. ಇದನ್ನೂ ಓದಿ: ಬ್ರೋಕರ್ ಮೋಹನ್ ಮನೆಯಲ್ಲಿತ್ತು 5 ಕೆಜಿ ಚಿನ್ನ – ಎಸಿಬಿ ಅಧಿಕಾರಿಗಳೇ ಶಾಕ್
ಶ್ರೀಲಂಕಾಗೆ ಈ ಮೊದಲು ಕೊರೊನಾ ಬಾರಿ ಹೊಡೆತ ನೀಡಿದೆ. ಕೊರೊನಾದಿಂದ ಶ್ರೀಲಂಕಾದ ಪ್ರವಾಸೋದ್ಯಮ ಬಂದ್ ಆದ ಪರಿಣಾಮದಿಂದಾಗಿ ಸರ್ಕಾರಕ್ಕೆ ಬರುತ್ತಿದ್ದ ಆದಾಯ ಕಡಿತಗೊಂಡಿದೆ. ಶೇ.10 ಜಿಡಿಪಿ ಹೊಂದಿರುವ ಪ್ರವಾಸೋದ್ಯಮದ ಬಂದ್ ನಿಂದ ನಿರುದ್ಯೋಗ ಸೇರಿದಂತೆ ಜನರಲ್ಲಿ ಆರ್ಥಿಕ ಕೊರತೆ ಹೆಚ್ಚಳಗೊಂಡಿದೆ. ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳು ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್‍ಗಳಿಂದ ಶ್ರೀಲಂಕಾ ಸಾಲ ಪಡೆದುಕೊಂಡಿದೆ. ಇದರಿಂದಾಗಿ ಶ್ರೀಲಂಕಾ ಸರ್ಕಾರ ಆದಾಯವಿಲ್ಲದೇ ಕಂತುಗಳನ್ನು ಕಟ್ಟಲು ಪರದಾಡುತ್ತಿದೆ. ಇನ್ನೊಂದೆಡೆ ವಿದೇಶಿ ವಿನಿಮಯ ಮತ್ತು ಕರೆನ್ಸಿ ಮೌಲ್ಯ ಕುಸಿತ ಕಂಡ ಪರಿಣಾಮ ಸಣ್ಣ ಪುಟ್ಟ ವಸ್ತುಗಳಿಗೂ ದುಬಾರಿ ಬೆಲೆ ತೆತ್ತು ಆಮದು ಮಾಡುವಂತಹ ಪರಿಸ್ಥಿತಿ ಶ್ರೀಲಂಕಾಗೆ ಎದುರಾಗಿದೆ.
ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ಇತ್ತೀಚಿಗಷ್ಟೆ ಭಾರತ ಸರ್ಕಾರ ಕೋಟ್ಯಂತರ ರೂಪಾಯಿ ನೆರವನ್ನು ಶ್ರೀಲಂಕಾಗೆ ನೀಡುವುದಾಗಿ ಘೋಷಿಸಿತ್ತು. 1948ರಲ್ಲಿ ಸ್ವಾತಂತ್ರ್ಯ ಗಿಟ್ಟಿಸಿಕೊಂಡ ನಂತರ ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದ್ದು, ಅಗತ್ಯ ವಸ್ತುಗಳಿಗೂ ಭಾರೀ ಕೊರತೆ ಉಂಟಾಗಿದೆ.