ಬೆಂಗಳೂರು: ನಟ ಕಿಚ್ಚ ಸುದೀಪ್ ಸಿನಿಮಾರಂಗದವರಿಗೆ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂದು ಸವಾಲ್ ಹಾಕಿದ್ದು, ಈಗ ಎಲ್ಲೆಲ್ಲೂ ಆ ಸವಾಲಿನದ್ದೇ ಸುದ್ದಿಯಾಗಿದೆ.
ಒಬ್ಬರಿಂದ ಒಬ್ಬರಿಗೆ ಪಾಸ್ ಆಗುವ ಈ ಫಿಟ್ ನೆಸ್ ಚಾಲೆಂಜ್ ನಿಜಕ್ಕೂ ಸಖತ್ ಕುತೂಹಲಕಾರಿಯಾಗಿದೆ. ಇತ್ತೀಚೆಗೆ ಸುದೀಪ್ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಸವಾಲನ್ನು ರಿಯಲ್ ಸ್ಟಾರ್ ಉಪ್ಪೆಂದ್ರ ಅವರಿಗೆ ಹಾಕಿದ್ದರು. ಸುದೀಪ್ ಹಾಕಿದ್ದ ಸವಾಲು ಸ್ವೀಕರಿಸಿದ ಉಪ್ಪಿ ಡಿಫರೆಂಟಾಗಿಯೇ ಉತ್ತರಿಸಿದ್ದಾರೆ.
Advertisement
ಸುದೀಪ್ ಸವಾಲ್ ಸ್ವೀಕರಿಸಿದ ಉಪ್ಪಿ, ಜಿಮ್ ನಲ್ಲಿ ನಿಂತು ಡಂಬಲ್ಸ್ ಎತ್ತಿ ಪೋಸ್ ಕೊಡುತ್ತಾರೆ ಅಂದುಕೊಂಡಿದ್ದರು. ಆದರೆ ಅವರು ಕೈಯಲ್ಲಿ ಗುದ್ದಲಿ ಹಿಡಿದು ಮಣ್ಣು ಅಗೆದು ತೋರಿಸಿದ್ದಾರೆ. ಇದಕ್ಕಿಂತ ಬೆಸ್ಟ್ ವರ್ಕ್ ಔಟ್ ಮತ್ತೊಂದಿಲ್ಲ ಸುದೀಪ್ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಉಪ್ಪಿಯ ಕಸರತ್ತು ನೋಡಿದ ಕಿಚ್ಚ ಕೈಮುಗಿದು ಅಭಿನಂದನೆ ತಿಳಿಸಿದ್ದಾರೆ.
Advertisement
Advertisement
ಸುದೀಪ್ ಸವಾಲ್:
ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಈಗ ಸುದೀಪ್ ಕನ್ನಡ ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ್ದರು.
Advertisement
ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು ಅಂದ್ರೇನು?
ಸುದೀಪ್ `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಎನ್ನುವ ಸವಾಲು ಹಾಕಿದ್ದರು. `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಚಾಲೆಂಜ್ ಎಂದರೆ ಇಂದಿನ ತಮ್ಮ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ನಂತರ ಪ್ರತಿದಿನ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರ ಅವರು ಮತ್ತೆ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆಗ ಎರಡು ಫೋಟೋಗಳ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆಯಾಗಿರುತ್ತದೆ ಎಂಬುದನ್ನು ತೋರಿಸಬೇಕು.
#BringOutThePailwaanInYou ???????????????? pic.twitter.com/tdTU5LS5lY
— Upendra (@nimmaupendra) June 16, 2018