ಬೆಂಗಳೂರು: 2018 ಮುಗಿತು 2019ಕ್ಕೆ ವೆಲ್‍ಕಮ್ ಮಾಡಲು ಪಾರ್ಟಿ ಮೂಡ್‍ನಲ್ಲಿ ಇರುವವರು ಈ ಸುದ್ದಿ ಓದಲೇ ಬೇಕು. ನ್ಯೂಯರ್ ಕಿಕ್‍ನಲ್ಲಿ ಗಲಾಟೆ ಮಾಡಿದರೆ ಎಚ್ಚರವಾಗಿರಿ. ಏಕೆಂದರೆ ಪೊಲೀಸರಿಗೆ ಮಾರ್ಷಲ್ ಸಾಥ್ ಕೊಡುತ್ತಿದ್ದಾರೆ.
ಬೆಂಗಳೂರಿನ ಪಾಲಿಕೆಯ ಮಾರ್ಷಲ್ ಗಳು ಕಸ ವಿಲೇವಾರಿ ವಿಚಾರದಲ್ಲಿ ನಗರದ ಹಲವೆಡೆ ಗಸ್ತು ಕಾಯಲಿದ್ದಾರೆ. ನ್ಯೂ ಇಯರ್ ದಿನ ಎಲ್ಲೆಂದರಲ್ಲಿ ಕುಡಿದು ಬಾಟೆಲ್ ಎಸೆದರೆ, ಸಿಕ್ಕ ಸಿಕ್ಕ ಕಡೆ ಪಾಲಿಕೆ ಗೋಡೆಯನ್ನು ಶೌಚಾಲಯದಂತೆ ಬಳಸಿದರೆ ಮುಗಿತು. ತಿಂಡಿ ಪ್ಯಾಕೆಟ್ ತಿಂದು ರಸ್ತೆ, ಕಂಬ, ಫುಟ್ ಪಾತ್ ಮೇಲೆ ಸಿಕ್ಕ ಕಡೆ ಎಸೆದರೆ ಶಿಕ್ಷೆಗೆ ಗುರಿಯಾಗುತ್ತಿರಿ.
Advertisement
Advertisement
ಮೋಜು ಮಸ್ತಿ ಅಂತ ಕಸ ಹಾಕಿದರೆ 500 ರೂ. ನಿಂದ 50 ಸಾವಿರವರೆಗೂ ದಂಡ ಹಾಕಲು ಪಾಲಿಕೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಅಂತ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾ ನಗರ, ಕೋರಮಂಗಲ ಎಲ್ಲೆಲ್ಲಿ ಪಾರ್ಟಿ ಮಾಡುತ್ತಿರಾ ಅಲ್ಲಿ ಮಾರ್ಷಲ್ ಹಾಜರಿರುತ್ತಾರೆ. ಬೆಂಗಳೂರಿನ 50 ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಮಾರ್ಷಲ್ ಸಜ್ಜಾಗಿರುತ್ತಾರೆ. ಫೈನ್ ಹಾಕಲು ಬೆತ್ತ ಹಿಡಿದು ನಾಳೆ ಸಂಜೆ 4 ಗಂಟೆಯಿಂದಲೇ ಗಲ್ಲಿ ಗಲ್ಲಿಗಳಲ್ಲಿ ಗಸ್ತು ಕಾಯುತ್ತಾ ನಿಂತಿರುತ್ತಾರೆ.
Advertisement
Advertisement
ಹೊಸ ವರ್ಷದ ಕಿಕ್ ನಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಮುನ್ನ ಎಚ್ಚರವಾಗಿರಿ. ನಗರದ ಸ್ವಚ್ಚತೆ ಕಾಪಾಡಲು ಮಾರ್ಷಲ್ ಗಳನ್ನು ನೇಮಕ ಮಾಡಲಾಗಿದೆ. ಮಾರ್ಷಲ್ ಗಳು ಸಮವಸ್ತ್ರ ಹಾಗೂ ಬೆತ್ತದ ಆಯುಧ ಹೊಂದಿರುತ್ತಾರೆ. ನ್ಯೂ ಇಯರ್ ದಿನ ಸದ್ದು ಮಾಡಿ ಕುಣಿಯಿರಿ, ಮಸ್ತಿ ಅಂತ ಮ್ಯೂಸಿಕ್ ಕೇಳಿ, ಸುತ್ತಾಡಿ, ಓಡಿ, ಹಾಡು ಹೇಳಿಕೊಳ್ಳಿ ಆದರೆ ಗಲೀಜು ಮಾಡಬೇಡಿ. ಹೊಸ ವರ್ಷವನ್ನು ಸ್ವಚ್ಚತೆಯೊಂದಿಗೆ ವೆಲ್‍ಕಮ್ ಮಾಡಿ ಎಂದು ಬಿಬಿಎಂಪಿ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv