ನವದೆಹಲಿ: ಕರ್ನಾಟಕದ ಮೊಹಮ್ಮದ್ ಕೈಫ್ ಮುಲ್ಲಾ 10 ನೇ ತರಗತಿ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಸಮಧಾನಗೊಂಡಿದ್ದ ವಿದ್ಯಾರ್ಥಿ ಮುಲ್ಲಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
Advertisement
2017-18ರ ಶೈಕ್ಷಣಿಕ ವರ್ಷದ 10 ನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಬೆಳಗಾವಿಯ ಸೇಂಟ್ ಸ್ಸೇವಿಯಾರ್ ಹೈಸ್ಕೂಲಿನ ವಿದ್ಯಾರ್ಥಿ ಮೊಹಮ್ಮದ್ ಕೈಫ್ ಮುಲ್ಲಾ 625 ಅಂಕಗಳಿಗೆ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದನು. ವಿಜ್ಞಾನ ವಿಷಯದಲ್ಲಿ ಮೊಹಮ್ಮದ್ ಕೈಫ್ ಮುಲ್ಲಾ 100ಕ್ಕೆ 99 ಅಂಕಗಳನ್ನು ಪಡೆದಿದ್ದರು . ಇದರಿಂದ ಅಸಮಾಧಾನಗೊಂಡಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದನು.
Advertisement
ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ಮೊಹಮ್ಮದ್ ಕೈಫ್ ಮುಲ್ಲಾ ವಿಜ್ಞಾನ ವಿಷಯದಲ್ಲೂ 100 ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾನು. ಈ ಮೂಲಕ ಎಶೆಸ್ ಎಮ್ ಎಸ್ ಹಾಗೂ ಸುದರ್ಶನ್ ಕೆ ಎಸ್ ಸಾಲಿನಲ್ಲಿ ಮೊಹಮ್ಮದ್ ಕೈಫ್ ಮುಲ್ಲಾ 10 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಿಂಚಿದ್ದಾನೆ. ಇದನ್ನು ಓದಿ: SSLC ಫಲಿತಾಂಶ ಬಂದಾಗ 6 ನೇ ರ‍್ಯಾಂಕ್, ಮರು ಮೌಲ್ಯಮಾಪನದ ನಂತ್ರ ಜಿಲ್ಲೆಗೆ ಪ್ರಥಮ!
Advertisement
ಮೊಹಮ್ಮದ್ ಕೈಫ್ ಮುಲ್ಲಾ ಸರಕಾರಿ ಸೇವೆಗೆ ಸೇರಲು ಇಚ್ಛಿಸುತ್ತಿದ್ದು, ಬಾಲ ಕಾರ್ಮಿಕರ ಶಿಕ್ಷಣಕ್ಕಾಗಿ ಶ್ರಮಿಸುವ ಉದ್ದೇಶ ಹೊಂದಿದ್ದಾನೆ. ಮೊಹಮ್ಮದ್‍ರ ಈ ಸಾಧನೆ ಪಾಲಕರು, ಶಿಕ್ಷಕರು ಹಾಗೂ ಬಂಧುಗಳಿಗೆ ಹೆಮ್ಮೆ ತಂದಿದೆ. ಈ ಬಗ್ಗೆ ಮೊಹಮ್ಮದ್ ತಾಯಿ ಪ್ರತಿಕ್ರಿಯಿಸಿದ್ದು, ಮಗನ ಸಾಧನೆಗೆ ಮೆಚ್ಚಿದ್ದಾರೆ. ಅಲ್ಲದೇ ನಮ್ಮ ಸಾಮಾಜಿಕ ಸ್ಥಾನಮಾನವೇ ಬದಲಾಯಿತು. ದೊಡ್ಡ ಎನ್ ಜಿ ಓ ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ನಮ್ಮ ಮಗನನ್ನು ಸನ್ಮಾನಿಸಲು ಆಹ್ವಾನಿಸುತ್ತಿದ್ದಾರೆ ಎಂದು ಹೇಳಿದರು.
Advertisement
ತಮ್ಮ ಈ ಸಾಧನೆಯನ್ನು ಕುರಿತು ಮಾತನಾಡಿದ ಮೊಹಮ್ಮದ್ ಕೈಫ್ ಮುಲ್ಲಾ, ನನಗೆ 100% ಫಲಿತಾಂಶ ಬರುವ ನಂಬಿಕೆ ಇತ್ತು. ನಾನು ಪರೀಕ್ಷೆ ಮುಕ್ತಾಯಗೊಂಡ ನಂತರ ನನ್ನ ಶಿಕ್ಷಕರೊಂದಿಗೆ ಈ ಕುರಿತು ಚರ್ಚೆ ಮಾಡಿದ್ದೆ. ದಿನಕ್ಕೆ 12 ಗಂಟೆ ಸತತ ಓದಿಗೆ ಪ್ರತಿಫಲ ಸಿಕ್ಕಂತಾಗಿದೆ ಅಂತ ಹೇಳಿದ್ದಾನೆ.
ಒಟ್ಟಾರೆ ಈ ಬಾರಿ 10 ತರಗತಿ ಪರೀಕ್ಷೆಗೆ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ರು. ಅವರಲ್ಲಿ 602802 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದರು. ಈಗ ಮೊಹಮ್ಮದ್ ಕೈಫ್ ಮುಲ್ಲಾ ಕೂಡ ಟಾಪರ್ ಸಾಲಿಗೆ ಸೇರಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.