– ಕೆಕೆಆರ್ ದಾಖಲೆ ಉಡೀಸ್ ಮಾಡಿದ ಹೈದರಾಬಾದ್ ತಂಡ
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಹಾಗೂ ಎಸ್ಆರ್ಹೆಚ್ (SRH) ತಂಡಗಳ ನಡುವಿನ ಐಪಿಎಲ್ (IPL 2024) ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 25 ರನ್‌ಗಳ ಗೆಲುವು ಸಾಧಿಸಿದೆ.
Advertisement
ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಬೀಸಿದ ಎಸ್ಆರ್ಹೆಚ್ ತಂಡ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್‌ಗಳನ್ನು ಮಾತ್ರ ಕಲೆ ಹಾಕಿತು. ಇದನ್ನೂ ಓದಿ: RCBಗೆ ‘ಹೆಡ್ಡೇಕ್’- ತನ್ನದೇ ದಾಖಲೆ ಮುರಿದು IPLನಲ್ಲಿ ಮತ್ತೆ ಇತಿಹಾಸ ನಿರ್ಮಿಸಿದ ಹೈದರಾಬಾದ್
Advertisement
Advertisement
ಆರ್‌ಸಿಬಿ ಪರ ಬ್ಯಾಟ್ ಬೀಸಿದ ಕೊಹ್ಲಿ 20 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. 4 ಎಸೆತಗಳಲ್ಲಿ 7 ರನ್ ಗಳಿಸಿದ ವಿಲ್ ಜಾಕ್ವೆಸ್ ಮತ್ತೊಂದು ರನ್ ಗಳಿಸುವ ಯತ್ನದಲ್ಲಿ ರನ್ ಔಟ್ ಆದರು. . ರಜತ್ ಪಾಟಿದಾರ್ 5 ಎಸೆತಗಳಲ್ಲಿ 9 ರನ್ ಕಲೆ ಹಾಕಿ ಪೆವಿಲಿಯನ್‌ಗೆ ಮರಳಿದರು. ನಾಯಕ ಫಾಫ್ ಡುಪ್ಲೆಸಿಸ್ 28 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸ್ ಸಿಡಿಸಿ 62 ರನ್‌ಗಳನ್ನು ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಮಹಿಪಾಲ್ ಲೊಮ್ರೋರ್ 11 ಎಸೆತಗಳಿಗೆ 19 ರನ್ ಗಳಿಸಿ ಔಟಾದರು. 35 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 5 ಬೌಂಡರಿ ಸಿಡಿಸಿದ ದಿನೇಶ್ ಕಾರ್ತಿಕ್ 83 ರನ್ ಗಳಿಸಿ ಶತಕ ವಂಚಿತರಾದರು. ಅರ್ಜುನ್ ರಾವತ್ 14 ಎಸೆತಗಳಲ್ಲಿ 25 ಹಾಗೂ ವಿಜಯಕುಮಾರ್ ವೈಶಾಕ್ 2 ಎಸೆತಗಳಲ್ಲಿ ಒಂದು ರನ್ ಕಲೆಹಾಕಿದರು.
Advertisement
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆರಂಭಿಕ ಆಟಗಾರ ಅಭಿಷೇಕ್ 22 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸ್ ನೆರವಿನಿಂದ 34 ರನ್ ಗಳಿಸಿ ಔಟಾದರು. ಟ್ರಾವಿಸ್ ಹೆಡ್ 39 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ವೇಗದ ಶತಕವಾಗಿದೆ. ಅಂತಿಮವಾಗಿ ಟ್ರಾವಿಸ್ 41 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಸಿಕ್ಸ್ ನೆರವಿನಿಂದ 102 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆಟಗಾರ ಹೆನ್ರಿಚ್ ಕ್ಲಾಸೆನ್, 31 ಎಸೆತಗಳಲ್ಲಿ 67 ರನ್ ಗಳಿಸಿ ವೇಗಿ ಫರ್ಗುಸನ್ ಎಸೆತದಲ್ಲಿ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು. ಅಬ್ದುಲ್ ಸಮದ್ 10 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸ್ ಸಿಡಿಸಿ 37 ರನ್ ಕಲೆ ಹಾಕಿದರು. ಏಡೆನ್ ಮಾರ್ಕ್‌ರಾಮ್ 17 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸ್ ಸಿಡಿಸಿ 32 ರನ್ ಗಳಿಸಿದರು. ಇದನ್ನೂ ಓದಿ: ಕೊನೇ ಓವರ್‌ನಲ್ಲಿ 26 ರನ್ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್ ಕಳಪೆ ಬೌಲಿಂಗ್‌ಗೆ ಫುಲ್ ಕ್ಲಾಸ್