ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟ್ರಾವಿಸ್ ಹೆಡ್ ಸ್ಫೋಟಕ ಶತಕ, ಹೆನ್ರಿಕ್ ಕ್ಲಾಸೆನ್ ಮಿಂಚಿನ ಅರ್ಧಶತಕದೊಂದಿಗೆ ಬ್ಯಾಟರ್‌ಗಳರು ಸಿಕ್ಸರ್, ಬೌಂಡರಿ ಸಿಡಿಸಿದ ಪರಿಣಾಮ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಐಪಿಎಲ್‌ನಲ್ಲಿ (IPL) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ.
ಮೂರು ವಿಕೆಟ್ ನಷ್ಟಕ್ಕೆ 287 ರನ್ ಹೊಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ್ದ ತನ್ನದೇ ದಾಖಲೆಯನ್ನ ಎಸ್‌ಆರ್‌ಹೆಚ್ ಪುಡಿ ಪುಡಿ ಮಾಡಿದೆ. ಅಲ್ಲದೇ ಅತಿಹೆಚ್ಚು ರನ್ ಗಳಿಸಿದ್ದ ಆರ್‌ಸಿಬಿ ದಾಖಲೆಯನ್ನು ಆರ್‌ಸಿಬಿ (RCB) ವಿರುದ್ಧವೇ ನುಚ್ಚುನೂರು ಮಾಡಿದೆ.
Advertisement
Advertisement
ಟಾಸ್ ಸೋತು ಬ್ಯಾಟ್ ಮಾಡಿದ ಹೈದರಾಬಾದ್ ಬ್ಯಾಟರ್‌ಗಳು ಆರಂಭದಿಂದಲೇ ಚಚ್ಚಲು ಆರಂಭಿಸಿದರು. ಮೊದಲ ವಿಕೆಟಿಗೆ 8.1 ಓವರ್‌ಗಳಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಬರೋಬ್ಬರಿ 108 ರನ್ ಬಾರಿಸಿತ್ತು. ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 34 ರನ್ ಗಳಿಸಿ ಔಟಾಗುತ್ತಿದ್ದಂತೆ, ಕ್ರೀಸ್‌ಗೆ ಬಂದ ಹೆನ್ರಿಕ್ ಕ್ಲಾಸೆನ್, ಟ್ರಾವಿಡ್ ಹೆಡ್ ಜೊತೆಗೂಡಿ ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚಚ್ಚಲು ಶುರು ಮಾಡಿದರು.
Advertisement
ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 102 ರನ್ (8 ಸಿಕ್ಸರ್, 9 ಬೌಂಡರಿ) ಚಚ್ಚಿದರೆ, ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ (7 ಸಿಕ್ಸರ್, 2 ಬೌಂಡರಿ) ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಏಡನ್ ಮಾರ್ಕ್ರಮ್ ಸ್ಫೋಟಕ 32 ರನ್, ಅಬ್ದುಲ್ ಸಮದ್ ಕೇವಲ 10 ಎಸೆತಗಳಲ್ಲಿ 37 ರನ್ ಚಚ್ಚಿ ತಮ್ಮದೇ ತಂಡದ ದಾಖಲೆ ಮುರಿಯುವಲ್ಲಿ ಯಶಸ್ವಿಯಾದರು.
Advertisement
IPL ನಲ್ಲಿ ರನ್ ಹೊಳೆ ಹರಿಸಿದ ಟಾಪ್-5 ತಂಡಗಳು:
ಸನ್ ರೈಸರ್ಸ್ ಹೈದರಾಬಾದ್ – 287 ರನ್
ಸನ್ ರೈಸರ್ಸ್ ಹೈದರಾಬಾದ್ – 277 ರನ್
ಕೋಲ್ಕತ್ತಾ ನೈಟ್ ರೈಡರ್ಸ್ – 272 ರನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು – 263 ರನ್
ಲಕ್ನೋ ಸೂಪರ್ ಜೈಂಟ್ಸ್ – 257 ರನ್