ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‍ಗಳ ಉತ್ತಮ ನಿರ್ವಹಣೆಯ ಫಲವಾಗಿ ಪಂಜಾಬ್ ವಿರುದ್ಧ 6 ರನ್‍ಗಳ ಜಯ ದಾಖಲಿಸಿದೆ. ಈ ಮೂಲಕ ಆರ್‌ಸಿಬಿ ಮೂರನೇ ತಂಡವಾಗಿ ಪ್ಲೇ ಆಫ್‍ಗೆ ಎಂಟ್ರಿ ಕೊಟ್ಟಿದೆ.
Advertisement
ಗೆದ್ದಿದ್ದು ಹೇಗೆ?
ಕೊನೆಯ 12 ಎಸೆತಗಳಲ್ಲಿ ಪಂಜಾಬ್ ಗೆಲ್ಲಲು 27 ರನ್ ಬೇಕಿತ್ತು. ಸಿರಾಜ್ 19ನೇ ಓವರಿನಲ್ಲಿ 8 ರನ್ ಮಾತ್ರ ನೀಡಿದರು. ಕೊನೆಯ 6 ಎಸೆತದಲ್ಲಿ 19 ರನ್ ಬೇಕಿತ್ತು. ಈ ಓವರಿನಲ್ಲಿ ಹೆನ್ರಿಕ್ಸ್ ಸಿಕ್ಸ್ ಹೊಡೆದರೂ ಪಂಜಾಬ್ ಕೇವಲ 12 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಆರ್‌ಸಿಬಿ ಮೂರನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತು.
Advertisement
Advertisement
ಕನ್ನಡಿಗರ ಬೊಂಬಾಟ್ ಬ್ಯಾಟಿಂಗ್
165ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಪಂಜಾಬ್ ತಂಡಕ್ಕೆ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 91ರನ್(66 ಎಸೆತ) ಜೊತೆಯಾಟವಾಡಿದರು. ಆರಂಭದಲ್ಲಿ ಉತ್ತಮ ಆಡಿದ ಪಂಜಾಬ್ ತಂಡ ಕೊನೆಯಲ್ಲಿ ವಿಕೆಟ್ ಕಳೆದುಕೊಂಡು ರನ್ ಗಳಿಸಲು ಒದ್ದಾಡಿತು. ಪಂಜಾಬ್ ಪರ ರಾಹುಲ್ 39ರನ್(35 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಅಗರ್ವಾಲ್ 57ರನ್(42 ಎಸೆತ 6 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದ ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಗೆಲುವಿಗಾಗಿ ಹೋರಾಟ ನಡೆಸಿದರು ಕೂಡ ಗೆಲುವು ಪಡೆಯಲು ಆರ್‌ಸಿಬಿ ಬೌಲರ್ ಗಳು ಅಡ್ಡಿಯಾದರೂ ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 158ರನ್ ಗಳಿಸಿ 7ರನ್‍ಗಳ ಸೋಲುಕಂಡಿತು.
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನು ಪಡೆಯಿತು. ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 68ರನ್(58 ಎಸೆತ) ಜೊತೆಯಾಟವಾಡಿದರು. ವಿರಾಟ್ ಕೊಹ್ಲಿ 25ರನ್(24 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಪಡಿಕ್ಕಲ್ 40ರನ್(38 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.
ಎಬಿಡಿ, ಮ್ಯಾಕ್ಸಿ ಸಿಡಿಲಬ್ಬರ:
ನಂತರ ಜೊತೆಯಾದ ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತು ಎಬಿಡಿ ವಿಲಿಯರ್ಸ್ ಬೌಂಡರಿ ಸಿಕ್ಸರ್ ಗಳ ಮೂಲಕ ಅಬ್ಬರದ ಆಟವಾಡಿದರು. ಈ ಜೋಡಿ 4ನೇ ವಿಕೆಟ್‍ಗೆ 73ರನ್(39 ಎಸೆತ)ಗಳ ಜೊತೆಯಾಟವಾಡಿತು. ಎಬಿಡಿ 23ರನ್(18 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ರನ್‍ಔಟ್ ಆದರೆ, ಮಾಕ್ಸಿ 57ರನ್(33 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 20 ಓವರ್ ಗಳ ಅಂತ್ಯಕ್ಕೆ ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 164ರನ್ ಗಳಿಸಿತು.
ಪಂಜಾಬ್ ಪರ ಮೊಯಿಸ್ ಹೆನ್ರಿಕ್ಸ್ ಮತ್ತು ಮೊಹಮ್ಮದ್ ಶಮಿ ತಲಾ 3 ವಿಕೆಟ್ ಕಿತ್ತು ಮಿಂಚಿದರು.