ಅಹಮದಾಬಾದ್: ಐಪಿಎಲ್ ಫೈನಲ್ (IPL Final) ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿದೆ. ಬೆಂಗಳೂರು ಅಭಿಮಾನಿಗಳು ಆರ್‌ಸಿಬಿ (RCB) ಗೆಲ್ಲಬೇಕೆಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಈ ಪಂದ್ಯಕ್ಕೆ ಮಳೆ (Rain) ಬರಬಹುದೇ ಎಂಬ ಆತಂಕ ಈಗ ಅಭಿಮಾನಿಗಳನ್ನು ಕಾಡುತ್ತಿದೆ.
ಪಂಜಾಬ್-ಮುಂಬೈ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಕೊನೆಗೂ ಮಳೆ ನಿಂತ ಮೇಲೆ ಸುಮಾರು 2:30 ಗಂಟೆಯ ನಂತರ ಪಂದ್ಯ ಆಡಿಸಲಾಗಿತ್ತು. ಮಳೆ ನಿಂತ ಬಳಿಕ ಪೂರ್ಣ 20 ಓವರ್‌ಗಳನ್ನು ಆಡಿಸಲಾಗಿತ್ತು. ಇದನ್ನೂ ಓದಿ: IPL Final | ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್

ಹವಾಮಾನ ವರದಿ ಪ್ರಕಾರ ಅಹಮದಾಬಾದ್‌ನಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ. ಮಳೆ ಬಂದರೂ ದೊಡ್ಡ ಮಟ್ಟದ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಪ್ರತಿ ದೊಡ್ಡ ಕ್ರಿಕೆಟ್ ಟೂರ್ನಿಗೆ ಇರುವಂತೆ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ.
ಒಂದು ವೇಳೆ ಮಂಗಳವಾರ ಪಂದ್ಯ ಸಾಧ್ಯವಾಗದೇ ಹೋದರೆ ಮೀಸಲು ದಿನವಾದ ಬುಧವಾರ ಪಂದ್ಯ ನಡೆಯಲಿದೆ. ಒಂದು ವೇಳೆ ಎರಡೂ ದಿನ ಪಂದ್ಯ ನಡೆಯದೇ ಇದ್ದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ (Punjab Kings) ತಂಡ ಚಾಂಪಿಯನ್ ಆಗಲಿದೆ. ಇದನ್ನೂ ಓದಿ: ಪಂಜಾಬ್ ವಿರುದ್ಧ ಫೈನಲ್ ಮ್ಯಾಚ್ – ಆರ್‌ಸಿಬಿ ಫ್ಯಾನ್ಸ್‌ಗೆ 1 ರೂ.ಗೆ ಆಫರ್ ಕೊಟ್ಟ ಸ್ನೂಕರ್ ಕ್ಲಬ್
ಲೀಗ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಲಾ 19 ಅಂಕ ಸಂಪಾದಿಸಿದ್ದರೂ ನೆಟ್ ರನ್ ರೇಟ್‌ನಲ್ಲಿ ಪಂಜಾಬ್ ಮುಂದಿದೆ. ಆರ್‌ಸಿಬಿ 0.301 ನೆಟ್ ರನ್ ರೇಟ್ ಹೊಂದಿದ್ದರೆ ಪಂಜಾಬ್ 0.372 ಹೊಂದಿದೆ. 0.071 ಅಂಕ ಹೆಚ್ಚಿರುವ ಕಾರಣ ಪಂಜಾಬ್ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
 


 
		 
		 
		 
		 
		
 
		 
		 
		 
		