ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಶಾಕ್ ಎದುರಾಗಿದೆ. ಸ್ಟಾರ್ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್(Devdutt Padikkal) ಆರೋಗ್ಯ ಸಮಸ್ಯೆಯಿಂದ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ.
ಪಡಿಕ್ಕಲ್ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿದ್ದು, ಆರ್‌ಸಿಬಿಯ(RCB) ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದೀಗ ಪಡಿಕ್ಕಲ್ ಸ್ಥಾನವನ್ನು ತುಂಬಲು ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್‌ವಾಲ್‌ನನ್ನು(Mayank Agarwal) ತಂಡಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಇದನ್ನೂ ಓದಿ: ಬೀಚ್‌ನಲ್ಲಿ ಸುನಾಮಿ ಎಬ್ಬಿಸಿ, ಪಡ್ಡೆ ಹುಡುಗರಿಗೆ ಗ್ಲಾಮರ್ ಟ್ರೀಟ್ ಕೊಟ್ಟ ರಮ್ಯಾ!
ಆರ್‌ಸಿಬಿ ಪರ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಪಡಿಕ್ಕಲ್ 10 ಪಂದ್ಯಗಳಲ್ಲಿ 247ರನ್ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳೂ ಒಳಗೊಂಡಿವೆ. ಹೆಚ್ಚಿನ ಪಂದ್ಯಗಳಲ್ಲಿ ದೇವದತ್ತ್ ಕಳಪೆ ಬ್ಯಾಟಿಂಗ್ ಮೂಲಕ ನಿರಾಶೆ ಮೂಡಿಸಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನು ಜಗತ್ತಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಬೆಳಗಾವಿಯ ಸೊಸೆ!
ಇನ್ನು ಮಯಾಂಕ್ 2011ರಲ್ಲಿ ಆರ್‌ಸಿಬಿ ಪರ ಆಡುವ ಮೂಲಕ ಐಪಿಎಲ್ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರು ಆರ್‌ಸಿಬಿಯಿಂದ ಹೊರಬಿದ್ದಿದ್ದರು. ಇವರು ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಒಟ್ಟು 127 ಪಂದ್ಯಗಳನ್ನಾಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಸನ್‌ರೈಸ್‌ರ್ಸ್ ಹೈದರಾಬಾದ್(Sunrisers Hyderabad) ಪರ ಇದ್ದ ಮಯಾಂಕ್ ಅಗರ್ವಾಲ್ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಹಾಗಾಗಿ 2025ರ ಐಪಿಎಲ್‌ಗೆ ನಡೆದ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಮಯಾಂಕ್‌ರನ್ನ ಆರ್‌ಸಿಬಿ ಫ್ರಾಂಚೈಸಿಯು 1 ಕೋಟಿ ರೂ.ಗೆ ಖರೀದಿ ಮಾಡಿದೆ. ಇದನ್ನೂ ಓದಿ: ಭಾರತದ ವಿರುದ್ಧವೇ ಪೋಸ್ಟ್ – ಮಲಯಾಳಂ ನಟಿ ವಿರುದ್ಧ ಆಕ್ರೋಶ
ಸದ್ಯ ಆರ್‌ಸಿಬಿಗೆ ಲೀಗ್ ಸುತ್ತಿನಲ್ಲಿ ಮೂರು ಪಂದ್ಯಗಳು ಬಾಕಿ ಉಳಿದಿವೆ. ಮೇ 9ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಕಾದಾಟಕ್ಕಿಳಿಯಲಿದೆ. ಮೇ 13ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹಾಗೂ ಮೇ 17ರಂದು ಕೆಕೆಆರ್ ವಿರುದ್ಧ ತವರು ಕ್ರೀಡಾಂಗಣದಲ್ಲಿ ಆಡಲಿದೆ.