ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 16 ವರ್ಷಗಳ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡುವ ಜೊತೆಗೆ ಕೋಟಿ ಕೋಟಿ ಬಹುಮಾನವನ್ನು ಆರ್‌ಸಿಬಿ ಮಹಿಳಾ ತಂಡ (RCB Womens Team) ಬಾಚಿಕೊಂಡಿತು.
Mr. Nags gatecrashes WPL trophy celebrations 🕶️
His dream finally comes true and Nags is ecstatic and emotional at the same time. 👨🏻#PlayBold #ನಮ್ಮRCB #SheIsBold #WPL2024 pic.twitter.com/quXN87mmvl
— Royal Challengers Bangalore (@RCBTweets) March 18, 2024
Advertisement
ಅರುಣ್ ಜೆಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, ಸೋಫಿ ಮೊಲಿನೆಕ್ಸ್, ಶ್ರೇಯಾಂಕ ಪಾಟೀಲ್ ಅವರ ಸ್ಪಿನ್ ಮೋಡಿಗೆ ನಲುಗಿ 113 ರನ್‌ಗಳಿಗೆ ಆಲ್‌ಔಟ್ ಆಯಿತು. ಬೌಲಿಂಗ್‌ನಲ್ಲಿ ವಿಕೆಟ್ ಪಡೆಯದಿದ್ದರೂ ಕೊನೇ ಓವರ್‌ವರೆಗೂ ಹೋರಾಟ ನಡೆಸಿದ ಡೆಲ್ಲಿ ತಂಡ 8 ವಿಕೆಟ್‌ಗಳಿಂದ ಸೋಲನುಭವಿಸಿತು. ನಂತರ ವಿಜೇತ ತಂಡ ಹಾಗೂ ರನ್ನರ್ ಅಪ್ ತಂಡಕ್ಕೆ ನಗದು ಬಹುಮಾನ ನೀಡಲಾಯಿತು.
Advertisement
Advertisement
ಆರ್‌ಸಿಬಿ ದೋಚಿದ ಬಹುಮಾನದ ಮೊತ್ತ ಎಷ್ಟು?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಫೈನಲ್ ಹಣಾಹಣಿಯಲ್ಲಿ 8 ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್ ಆದ ಆರ್‌ಸಿಬಿ ಮಹಿಳಾ ತಂಡಕ್ಕೆ 6 ಕೋಟಿ ರೂ. ಗಳ ನಗದು ಬಹುಮಾನ ನೀಡಲಾಗಿದೆ. ರನ್ನರ್ ಅಪ್ ಪ್ರಶಸ್ತಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿತು.
Advertisement
ಬಹುಮಾನದ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಚಾಂಪಿಯನ್): 6 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್ (ರನ್ನರ್ ಅಪ್): 3 ಕೋಟಿ ರೂ.
ಶಫಾಲಿ ವರ್ಮಾ (ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್): 1 ಲಕ್ಷ ರೂ.
ಶಫಾಲಿ ವರ್ಮಾ (ಸಿಕ್ಸರ್ ಆಫ್ ದಿ ಮ್ಯಾಚ್): 1 ಲಕ್ಷ ರೂ.
ಶಫಾಲಿ ವರ್ಮಾ ( ಸಿಕ್ಸರ್ ಆಫ್ ದಿ ಸೀಸನ್): 5 ಲಕ್ಷ ರೂ.
ಶ್ರೇಯಾಂಕಾ ಪಾಟೀಲ್ (ಉದಯೋನ್ಮುಖ ಆಟಗಾರ್ತಿ): 5 ಲಕ್ಷ ರೂ.
ಎಲಿಸ್ ಪೆರ್ರಿ (ಆರಂಜ್ ಕ್ಯಾಪ್): 5 ಲಕ್ಷ ರೂ.
ಶ್ರೇಯಾಂಕಾ ಪಾಟೀಲ್ (ಪರ್ಪಲ್ ಕ್ಯಾಪ್): 5 ಲಕ್ಷ ರೂ.
ದೀಪ್ತಿ ಶರ್ಮಾ (ಅತ್ಯಂತ ಮೌಲ್ಯಯುತ ಆಟಗಾರ್ತಿ): 5 ಲಕ್ಷ ರೂ.