ಬೆಂಗಳೂರು: ಏಪ್ರಿಲ್ 24ರ ದಿನ ಕನ್ನಡಿಗರ ಪಾಲಿನ ಹೆಮ್ಮೆಯ ದಿನ. ಏಕೆಂದರೆ ಇಂದು ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜ್‌ಕುಮಾರ್ ಅವರ ಜನ್ಮದಿನ.
ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರ ಪುತ್ರ ಮುತ್ತುರಾಜ್ ಆಗಿ ಚಿತ್ರರಂಗ ಪ್ರವೇಶಿಸಿದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಹಲವು ದಾಖಲೆಗಳನ್ನೇ ನಿರ್ಮಿಸಿದವರು ರಾಜ್‌ಕುಮಾರ್. ಕನ್ನಡ ನಾಡು, ನುಡಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಯಿಂದಾಗಿ ಅವರು ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್ ನೆನೆದು ತಂಗಿ ಕಣ್ಣೀರು
Advertisement
"ನಾವಾಡುವ ನುಡಿಯೇ ಕನ್ನಡ ನುಡಿ." ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ|| ರಾಜ್ ಕುಮಾರ್ ಅವರ 93ನೆ ಜನ್ಮಮಹೋತ್ಸವದ ನೆನಪಿನಲ್ಲಿ. ❤️
Remembering one of the greatest icons of Kannada and Indian cinema, Dr. Rajkumar on his birth anniversary! ????#ನಮ್ಮRCB #DrRajkumar pic.twitter.com/hYU8Xi0UaA
— Royal Challengers Bangalore (@RCBTweets) April 24, 2022
Advertisement
ಹೀಗೆ ಅಭಿಮಾನಿಗಳ ಹಾಗೂ ಕನ್ನಡ ಪ್ರೇಮಿಗಳ ಆರಾಧ್ಯ ದೈವವಾಗಿ ಸ್ಥಾನ ಪಡೆದುಕೊಂಡಿರುವ ಡಾ.ರಾಜ್‌ಕುಮಾರ್ ಅವರ ಜನ್ಮದಿನವಾದ ಇಂದು ಹಲವಾರು ರಾಜಕೀಯ ಗಣ್ಯರು, ಚಲನಚಿತ್ರ ನಟ-ನಟಿಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿದ್ದಾರೆ. #ಡಾ.ರಾಜ್‌ಕುಮಾರ್ ಹ್ಯಾಶ್‌ಟ್ಯಾಗ್‌ನೊಂದಿಗೆ ಟಾಪ್‌ಟ್ರೆಂಡಿಗ್‌ನಲ್ಲಿ ರಾಜ್ ಕಂಗೊಳಿಸುತ್ತಿದ್ದಾರೆ.
Advertisement
ಈ ಸಾಲಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಹ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಯಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನದ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭ ಕೋರಿ, ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ: ಉಪ್ಪಿ-ಆರ್‌ಜಿವಿ ಕಾಂಬಿನೇಷನ್ ಹೊಸ ಚಿತ್ರ: `ಐ ಆ್ಯಮ್ ಆರ್’ ಫಸ್ಟ್ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
Advertisement
Here’s wishing a true legend of World Cricket and the man who carried a billion dreams on his shoulders for a couple of decades, @sachin_rt, a very happy birthday! ????????????#PlayBold #WeAreChallengers #RCB #HappyBirthdaySachin pic.twitter.com/3BKneBS09c
— Royal Challengers Bangalore (@RCBTweets) April 24, 2022
ಡಾ.ರಾಜ್‌ಕುಮಾರ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ `ನಾವಾಡುವ ನುಡಿಯೇ ಕನ್ನಡ ನುಡಿ’, ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ.ರಾಜ್‌ಕುಮಾರ್ ಅವರ 93ನೇ ಜನ್ಮಮಹೋತ್ಸವದ ನೆನಪಿನಲ್ಲಿ’ ಎಂದು ಬರೆದುಕೊಂಡಿದ್ದು, ಅಣ್ಣಾವ್ರ ದಿನವನ್ನು ಆರ್‌ಸಿಬಿ ಸ್ಮರಿಸಿದೆ.
ಅಲ್ಲದೆ ಇದೇ ದಿನದಂದು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬವೂ ಇದ್ದು, ತೆಂಡೂಲ್ಕರ್ ಅವರಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ಶುಭಾಶಯ ಕೋರಿದೆ.