ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದ್ದು, ಬ್ರ್ಯಾಂಡ್ ಮೌಲ್ಯವು ಬರೋಬ್ಬರಿ 312 ಮಿಲಿಯನ್ ಡಾಲರ್ (2988 ಕೋಟಿ ರೂ.ಗೆ) ಏರಿಕೆಯಾಗಿದೆ.
ಜಾಗತಿಕ ಹೂಡಿಕೆ ಬ್ಯಾಂಕ್ ಆಗಿರುವ ‘ಹೌಲಿಹಾನ್ ಲೋಕಿ’ (Houlihan Lokey) ನಡೆಸಿದ ಅಧ್ಯಯನದ ವರದಿ ಪ್ರಕಾರ, ಆರ್‌ಸಿಬಿ ಬ್ರ್ಯಾಂಡ್ ಮೌಲ್ಯವು ಕಳೆದ ವರ್ಷಕ್ಕಿಂತ ಶೇ. 16ರಷ್ಟು ಪ್ರಗತಿ ಕಂಡಿದೆ. ಈ ಮೂಲಕ ಬ್ರ್ಯಾಂಡ್ ಮೌಲ್ಯದಲ್ಲಿ 300 ಮಿಲಿಯನ್ ಡಾಲರ್ ಗಡಿ ದಾಟಿದ ವಿಶ್ವದ ಮೊದಲ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಭಾರತದ ಪದಕ ಬೇಟೆ, ಇತಿಹಾಸ ಸೃಷ್ಟಿ – ಗುಲ್ವಿರ್ ಸಿಂಗ್, ಹರ್ಜಿಂದರ್ ಕೌರ್‌ಗೆ ರಜತ ಪದಕ
ಆರ್‌ಸಿಬಿ ತಂಡವು ಕಳೆದ ವರ್ಷ 17,000 ಕೋಟಿ ರೂ.ಗೆ ಮಾರಾಟಗೊಂಡಿತ್ತು. ಆದರೆ ತಂಡದ ಮಾರಾಟ ಮೌಲ್ಯ ಮತ್ತು ಬ್ರ್ಯಾಂಡ್ ಮೌಲ್ಯ ಭಿನ್ನವಾಗಿದ್ದು, ಸಾಮಾನ್ಯವಾಗಿ ಬ್ರ್ಯಾಂಡ್ ಮೌಲ್ಯವು ಮಾರಾಟ ಮೌಲ್ಯಕ್ಕಿಂತ 5 ರಿಂದ 7 ಪಟ್ಟು ಕಡಿಮೆ ಇರುತ್ತದೆ.
ಇತರ ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ:
ಮುಂಬೈ ಇಂಡಿಯನ್ಸ್: 2528 ಕೋಟಿ ರೂ.
ಕೋಲ್ಕತಾ ನೈಟ್ ರೈಡರ್ಸ್: 2346 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್: 2337 ಕೋಟಿ ರೂ.
ಕೇವಲ ಆರ್‌ಸಿಬಿ ಮಾತ್ರವಲ್ಲದೆ, ಒಟ್ಟಾರೆ ಐಪಿಎಲ್ ಲೀಗ್‌ನ ಬ್ರ್ಯಾಂಡ್ ಮೌಲ್ಯವು 1.97 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10.3ರಷ್ಟು ಅಧಿಕವಾಗಿದೆ. ಅಲ್ಲದೆ, 2023ರಿಂದೀಚೆಗೆ ಲೀಗ್‌ನ ಒಟ್ಟು ಮೌಲ್ಯವು 10 ಸಾವಿರ ಕೋಟಿ ರೂ.ಗೂ ಅಧಿಕವಾಗಿ ಹೆಚ್ಚಳ ಕಂಡಿದೆ. ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲಿಟ್ ಶರ್ಮಿಳಾ

