ಮುಂಬೈ/ಬೆಂಗಳೂರು: ಪ್ರತಿಷ್ಠಿತ 2023ರ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ದೇಶಾದ್ಯಂತ 12 ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದ್ದು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಂದ್ಯಗಳ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ.
No place like home, no place like Namma Chinnaswamy!
Tickets are out and moving fast. Haven’t we all waited enough? ????
Scan the QR code or click on the link in bio to book tickets today. #PlayBold #ನಮ್ಮRCB #IPL2023 pic.twitter.com/avZi4BesGB
— Royal Challengers Bangalore (@RCBTweets) March 16, 2023
Advertisement
ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಏಪ್ರಿಲ್ 2 ರಂದು ಆರ್‌ಸಿಬಿ ತಂಡ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್‌ಸಿಬಿ ಪಂದ್ಯದ ಎಲ್ಲಾ ಟಿಕೆಟ್‌ಗಳನ್ನು ಅಧಿಕೃತ ವೈಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಐಪಿಎಲ್ ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಿದ್ದು, 2,310 ರೂ. ಆರಂಭಿಕ ಬೆಲೆಯಿಂದ ಶುರುವಾಗಿದೆ. ಬೆಂಗಳೂರು ಮತ್ತು ಮುಂಬೈ ನಡುವಿನ ಪಂದ್ಯದ ಟಿಕೆಟ್ ದರ 2,310 ರೂ. ಗಳಿಂದ ಪ್ರಾರಂಭವಾಗುತ್ತದೆ. ಗರಿಷ್ಠ ದರ 42,350 ರೂ. ಗಳಷ್ಟಿದೆ. ಇತರೇ ಫ್ರಾಂಚೈಸಿಗಳು ಕನಿಷ್ಠ 900 ರೂ.ಗಳಿಂದ ಟಿಕೆಟ್ ದರ ಆರಂಭಿಸಿದ್ದರೆ, ಆರ್‌ಸಿಬಿ ಏಕಾಏಕಿ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡ್ತಿದೆ. ಇದನ್ನೂ ಓದಿ: ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ
Advertisement
Advertisement
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯಗಳ ಟಿಕೆಟ್ ದರ ನೋಡುವುದಾದರೆ, 2,310 ರೂ. 3,300 ರೂ. 4,840 ರೂ. 6,049 ರೂ. 9,075 ರೂ. 9,679 ರೂ. 10,890 ರೂ. 24,200 ರೂ. 42,350 ರೂ ವರೆಗಿದೆ. ಟಿಕೆಟ್ ದರ ನೋಡುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ಟಿಕೆಟ್ ದರ ವಿಚಾರವಾಗಿ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಕ್ ಮಾಡಿದ ಪಂತ್ – ಬೇಗ ಗುಣಮುಖರಾಗಿ ಅಂದ್ರು ಫ್ಯಾನ್ಸ್
Advertisement
ಟಿಕೆಟ್ ಖರೀದಿಸೋದು ಹೇಗೆ?
ಹಂತ 1: IPL 2023ರ ಪಂದ್ಯಕ್ಕಾಗಿ ಟಿಕೆಟ್ ಬುಕ್ ಮಾಡಲು ಸರಳವಾದ ಮಾರ್ಗವೆಂದರೆ Paytm ಇನ್‌ಸೈಡರ್ ವೆಬ್‌ಸೈಟ್ ಅಥವಾ BookMyShow ಗೆ ಭೇಟಿ ಮಾಡುವುದು.
ಹಂತ 2: IPL 2023ರಲ್ಲಿ ಆಡುತ್ತಿರುವ ಹತ್ತು ತಂಡಗಳ ಹೆಸರು, ಲೋಗೋಗಳೊಂದಿಗೆ ವೇಳಾಪಟ್ಟಿ ಕಾಣಬಹುದು.
ಹಂತ 3: ಪಂದ್ಯವನ್ನು ವೀಕ್ಷಿಸಲು ಬಯಸುವ ತಂಡದ ಐಕಾನ್ ಮೇಲೆ ಕ್ಲಿಕ್ ಮಾಡುವುದು ಮುಂದಿನ ಹಂತವಾಗಿದೆ. ಇದು ನಿಮ್ಮನ್ನು ವೀಕ್ಷಿಸುವ ಪಂದ್ಯಗಳ ಪಟ್ಟಿಯೊಂದಿಗೆ ಹೊಸ ಪುಟಕ್ಕೆ ಕರೆದೊಯ್ಯುತ್ತದೆ.
ಹಂತ 4: ನಂತರ ಪಂದ್ಯ ವೀಕ್ಷಿಸಲು ಬಯಸುವ ದಿನಾಂಕಆಯ್ಕೆ ಮಾಡಿ, ಪಂದ್ಯದ ಸಮಯ ಮತ್ತು ಸ್ಥಳ ಪರೀಕ್ಷಿಸಬೇಕು. ನಂತರ, ಬೆಲೆ ಶ್ರೇಣಿಯ ಆಧಾರದ ಮೇಲೆ ಟಿಕೆಟ್ ಆಯ್ಕೆ ಮಾಡಬೇಕು. UPI ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಹಣ ಪಾವತಿಸಿ, ಟಿಕೆಟ್ ಬುಕ್ಕಿಂಗ್ ಮಾಡಬಹುದು.
????Tickets for RCB Home Matches of #IPL2023 are on sale now!????
Scan the QR code or click on the link in bio to book the best seats at the Chinnaswamy stadium to watch your favourite team play.
Contact [email protected] for any concerns or queries.#PlayBold #ನಮ್ಮRCB pic.twitter.com/UFam9Gawib
— Royal Challengers Bangalore (@RCBTweets) March 16, 2023
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್‌ಸಿಬಿ ತಂಡದ ವೇಳಾಪಟ್ಟಿ
1) ಆರ್‌ಸಿಬಿ vs ಮುಂಬೈ ಇಂಡಿಯನ್ಸ್- ಏಪ್ರಿಲ್ 2, ಬೆಂಗಳೂರು
2) ಆರ್‌ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ – ಏಪ್ರಿಲ್ 10, ಬೆಂಗಳೂರು
3) ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ – ಏಪ್ರಿಲ್ 15, ಬೆಂಗಳೂರು
4) ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ – ಏಪ್ರಿಲ್ 17, ಬೆಂಗಳೂರು
5) ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ – ಏಪ್ರಿಲ್ 23, ಬೆಂಗಳೂರು
6) ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ – ಏಪ್ರಿಲ್ 26, ಬೆಂಗಳೂರು
7) ಆರ್‌ಸಿಬಿ vs ಗುಜರಾತ್ ಟೈಟನ್ಸ್ – ಮೇ 21, ಬೆಂಗಳೂರು