ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳ ಅಡಿಯಲ್ಲಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ರಿಸರ್ವ ಬ್ಯಾಂಕ್ ಸ್ಪಷ್ಟಪಡಿಸಿದ್ದು, ಆಧಾರ್ ಲಿಂಕ್ ಕುರಿತು ಜನತೆಯಲ್ಲಿ ಮೂಡಿದ್ದ ಗೊಂದಲಗಳಿಗೆ ಈಗ ಆರ್‍ಬಿಐ ತೆರೆ ಎಳೆದಿದೆ.
ಈ ಹಿಂದೆ ಕೇಂದ್ರ ಸರ್ಕಾರವು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ 2017 ಡಿಸೆಂಬರ್ 31 ಅಂತಿಮ ದಿನ ಎಂಬ ಆದೇಶವನ್ನು ಹೊರಡಿಸಿತ್ತು. ಆದರೆ ಬಗ್ಗೆ ರಿಸರ್ವ್ ಬ್ಯಾಂಕ್ ಯಾವುದೇ ಆದೇಶವು ನೀಡಿಲ್ಲ ಎಂದು ತಿಳಿಸಿತ್ತು.
Advertisement
ಪ್ರಸ್ತುತ ಈ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ರಿಸರ್ವ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ. ಈಗಾಗಲೇ ತೆರೆಯಲಾಗಿರುವ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಬೇಕಾಗಿದ್ದು, ಹೊಸ ಖಾತೆಯನ್ನು ಆಂಭಿಸಬೇಕಾದರೆ 12 ಸಂಖ್ಯೆಗಳ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಬೇಕಿದೆ ಎಂದು ತಿಳಿಸಿದೆ.
Advertisement
ಆರ್ಥಿಕ ಸಚಿವ ಆರುಣ್ ಜೇಟ್ಲಿ ಆಗಸ್ಟ್ ತಿಂಗಳಿನಲ್ಲಿ ಸುಮಾರು 52.4 ಕೋಟಿ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಣೆ ಮಾಡಲಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ಹಲವು ಬ್ಯಾಂಕ್ ಗ್ರಾಹಕರು ಟ್ಯಾಕ್ಸ್ ಸಲ್ಲಿಕೆಯ ವೇಳೆ ತಮ್ಮ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಪ್ಯಾನ್ ನಂಬರ್ ಲಿಂಕ್ ಮಾಡಿದ್ದಾರೆ.
Advertisement
ಆಧಾರ್ ಲಿಂಕ್ ಮಾಡುವ ಕುರಿತು ಮಾಹಿತಿಯನ್ನು ಕೋರಿ ಆರ್‍ಟಿಐ ಕಾರ್ಯಕರ್ತರೊಬ್ಬರು ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ಆರ್‍ಬಿಐ ತಾನು ಯಾವುದೇ ಬ್ಯಾಂಕ್‍ಗಳಿಗೆ ಈ ಕುರಿತು ಆದೇಶವನ್ನು ನೀಡಿಲ್ಲ ಎಂದು ತಿಳಿಸಿತ್ತು.