ನವದೆಹಲಿ: ಯುಎಸ್-ಇರಾನ್ ಯುದ್ಧದ ನಡುವೆಯೂ RBI ರೆಪೊ ದರ (Repo Rate) 5.25% ರಲ್ಲೇ ಸ್ಥಿರವಾಗಿದೆ.
ಮೂರು ದಿನಗಳ ಹಣಕಾಸು ನೀತಿ ಸಮಿತಿ ಸಭೆಯ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಶೇಕಡಾ 5.25 ರಷ್ಟು ಯಥಾಸ್ಥಿತಿಯಲ್ಲಿ ಇರಿಸಿದೆ. ‘ತಟಸ್ಥ ನಿಲುವು’ ಕಾಯ್ದುಕೊಳ್ಳುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು. ಇದನ್ನೂ ಓದಿ: 2,000 ರೂ.ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ?
ಆರ್‌ಬಿಐ ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್‌ಡಿಎಫ್) ದರವನ್ನು ಶೇ.5 ರಲ್ಲಿಯೇ ಉಳಿಸಿಕೊಂಡಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ದರ ಮತ್ತು ಬ್ಯಾಂಕ್ ದರವನ್ನು ಶೇ.5.5 ರಲ್ಲಿಯೇ ಯಥಾಸ್ಥಿತಿಯಲ್ಲಿ ಇರಿಸಿದೆ.
ನೀತಿ ನಿರ್ಧಾರವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಇರಾನ್ ಯುದ್ಧದ ಮಧ್ಯೆ ಕಚ್ಚಾ ತೈಲ ಬೆಲೆಗಳು ಹೆಚ್ಚಿರುವುದನ್ನು ಒತ್ತಿ ಹೇಳಿದರು. ಹಣದುಬ್ಬರವು ನಿರೀಕ್ಷೆಯಂತೆ ಹೆಚ್ಚಾಗಿದೆ ಎಂದು ತಿಳಿಸಿದರು.
FY27 ಚಿಲ್ಲರೆ ಹಣದುಬ್ಬರದ ಅಂದಾಜನ್ನು ಹಿಂದಿನ ಶೇ.5.1 ರಿಂದ ಶೇ.5 ಕ್ಕೆ ಇಳಿಸಲಾಗಿದೆ. ಅದೇ ರೀತಿ, RBI FY27 ರ ನೈಜ GDP ಪ್ರಕ್ಷೇಪಣವನ್ನು ಶೇ.6 ರಿಂದ ಶೇ.6.7 ಕ್ಕೆ ಏರಿಸಿದೆ. ಇದನ್ನೂ ಓದಿ: ಡಮ್ಮಿ ಸಿಎಂ – ವಿಜಯ್, ಟಿವಿಕೆ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ
