ನವದೆಹಲಿ: ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರ, ಬಿಗ್‌ಬಾಸ್ಕೆಟ್‌ಗಳಂತಹ ಆನ್‌ಲೈನ್ ಖರೀದಿಗೆ ಆರ್‌ಬಿಐ ಹೊಸ ಪೇಮೆಂಟ್ ವಿಧಾನವನ್ನು ಪರಿಚಯಿಸುತ್ತಿದೆ. ಅದೇ ಟೋಕನೈಸೇಶನ್.
ಜನವರಿ 1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ನೀವು ಆನ್‌ಲೈನ್‌ನಲ್ಲಿ ಖರೀದಿ ಮಾಡುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ವಿವರಗಳನ್ನು ಮತ್ತು ಮುಕ್ತಾಯ ದಿನಾಂಕವನ್ನು ನೀಡುವ ಅಗತ್ಯ ಇರುವುದಿಲ್ಲ. ಸರಳ ವಿಧಾನದ ಟೋಕನೈಸೆಶನ್ ನಿಮ್ಮ ಗೌಪ್ಯ ಮಾಹಿತಿಗಳನ್ನು ರಕ್ಷಿಸಲು ಸಹಕಾರಿಯಾಗಲಿದೆ.
Advertisement
ಏನಿದು ಟೋಕನೈಸೇಶನ್?
ಟೋಕನೈಸೇಶನ್ ಎನ್ನುವುದು ಕಾರ್ಡ್ ಮಾಹಿತಿಯನ್ನು ಟೋಕನ್ ನೊಂದಿಗೆ ಬದಲಾವಣೆ ಮಾಡಿಕೊಳ್ಳುವ ತಂತ್ರವಾಗಿದೆ. ಇದು ಗ್ರಾಹಕರ ಮಾಹಿತಿಗಳನ್ನು ಗೌಪ್ಯವಾಗಿಡುವುದರೊಂದಿಗೆ ಖರೀದಿಗಳು ಸುಗಮವಾಗಿ ನಡೆಯಲು ಸಹಕಾರಿಯಾಗಲಿದೆ. ಇದನ್ನೂ ಓದಿ: LPG ಗ್ಯಾಸ್, ಟಾಯ್ಲೆಟ್ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ
Advertisement
Advertisement
ಆರ್‌ಬಿಐ ಈ ಟೋಕನೈಸೇಶನ್ ವಿಧಾನವನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತಿಳಿಸಿದೆ. ಇದರ ಪ್ರಕಾರ ನೀವು ನಿಮ್ಮ ಕಾರ್ಡ್ ಹಿಂದುಗಡೆ ಇರುವ ಮೂರು ಡಿಜಿಟ್‌ನ ಸಿವಿವಿ ನಂಬರ್ ಅನ್ನು ಬಳಸುವ ಅಗತ್ಯ ಇರುವುದಿಲ್ಲ.
Advertisement
ಏನಿದರ ಪ್ರಯೋಜನ?
ಆನ್‌ಲೈನ್ ಶಾಪಿಂಗ್ ಮಾಡುವಾಗ ಕಾರ್ಡ್ ವಿವರಗಳನ್ನು ನೀಡುವುದರಿಂದ ಹ್ಯಾಕರ್ಸ್‌ಗಳು ಸುಲಭವಾಗಿ ವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಟೋಕನೈಸೇಶನ್ ನಿಂದ ಕಾರ್ಡ್ ವಿವರಗಳನ್ನು ಕದಿಯುವುದು ಸುಲಭದ ಕೆಲಸವಲ್ಲ. ಟೋಕನೈಸ್ ಮಾಡಿದ ಕಾರ್ಡ್ಗಳನ್ನು ನಿರ್ವಹಿಸಲು ಬ್ಯಾಂಕ್ ಪ್ರತ್ಯೇಕ ಇಂಟರ್‌ಫೇಸ್ ನೀಡುತ್ತದೆ. ಗ್ರಾಹಕರು ಯಾವುದೇ ಸಮಯದಲ್ಲೂ ಟೋಕನ್ ಅನ್ನು ಅಳಿಸಲೂ ಸಾಧ್ಯವಾಗಲಿದೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲುವ ಕಥೆಯಾಧಾರಿತ 83 ಸಿನಿಮಾಗೆ ಟ್ಯಾಕ್ಸ್ ಇಲ್ಲ!
ಟೋಕನ್ ಬಳಕೆ ಹೇಗೆ?
ಟೋಕನೈಸೇಶನ್ ಸೇವೆ ಸಂಪುರ್ಣ ಉಚಿತವಾಗಿರಲಿದ್ದು, ಬಳಕೆದಾರರು ತಮಗೆ ಬೇಕಾದಷ್ಟು ಸಲ ಕಾರ್ಡ್ಗಳನ್ನು ಟೋಕನೈಸ್ ಮಾಡಬಹುದು. ಈ ನಿಯಮ ದೇಶೀಯ ಕಾರ್ಡ್ಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ವಿದೇಶೀ ಕಾರ್ಡ್ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಆನ್‌ಲೈನ್ ಶಾಪಿಂಗ್ ಮಾಡುವಾಗ ವೆಬ್‌ಸೈಟ್‌ನ ಚೆಕ್‌ಔಟ್ ಪುಟದಲ್ಲಿ ತಮ್ಮ ಕಾರ್ಡ್ ಮಾಹಿತಿಯನ್ನು ಸಲ್ಲಿಸಬೇಕು. ಈ ಸಂದರ್ಭದಲ್ಲಿ ಟೋಕನೈಸೇಶನ್ ಅನ್ನು ಆಯ್ಕೆ ಮಾಡಬಹುದು. ಈ ಟೋಕನ್‌ಗಳು ಆನ್‌ಲೈನ್ ಪಾವತಿ ಮಾಡುವ ಸಂದರ್ಭದಲ್ಲಿ ಅತೀ ಕಡಿಮೆ ಕಾರ್ಡ್ ವಿವರಗಳನ್ನು ಕೇಳುತ್ತದೆ.