ನವದೆಹಲಿ: ಅಕ್ಟೋಬರ್ 7 ರವರೆಗೆ 2,000 ರೂ. ನೋಟುಗಳನ್ನು (Rs. 2000 Note) ಬದಲಾಯಿಸಿಕೊಳ್ಳಲು ಮತ್ತು ಠೇವಣಿ ಇಡಲು ಕೊನೆಯ ದಿನಾಂಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿಸ್ತರಿಸಿದೆ.
2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ 4 ತಿಂಗಳ ಗಡುವು ನಿನ್ನೆಗೆ (ಸೆಪ್ಟೆಂಬರ್ 30) ಮುಕ್ತಾಯಗೊಂಡಿತ್ತು. ಇದೀಗ ಪರಿಶೀಲನೆಯ ಆಧಾರದ ಮೇಲೆ 2,000 ರೂ. ನೋಟುಗಳನ್ನು ಠೇವಣಿ ಇಡಲು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಇದೇ ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಶನಿವಾರ ತಿಳಿಸಿದೆ.
Advertisement
Advertisement
ಅಕ್ಟೋಬರ್ 8 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳ ಠೇವಣಿ ಅಥವಾ ವಿನಿಮಯವನ್ನು ನಿಲ್ಲಿಸಲಾಗುತ್ತದೆ. ಆದರೂ 2,000 ರೂ. ನೋಟುಗಳು ಅಕ್ಟೋಬರ್ 7ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಆದರೆ ಅವುಗಳನ್ನು ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಇದನ್ನೂ ಓದಿ: 10 ಸಾವಿರ ಕೋಟಿ ಮೀಸಲು – ಮುಸ್ಲಿಂ ಮುಖಂಡರನ್ನು ಸೆಳೆಯಲು ಕಾಂಗ್ರೆಸ್‌ನಿಂದ ಭರಪೂರ ಅನುದಾನದ ಭರವಸೆ
Advertisement
ಮೇ 19ರಂದು ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ನೋಟುಗಳನ್ನು ಬದಲಾಯಿಸಿಕೊಳ್ಳಲು ಹಾಗೂ ಠೇವಣಿ ಇಡಲು ಸಾರ್ವಜನಿಕರಿಗೆ ಸಾಕಷ್ಟು ಸಮಯ ಒದಗಿಸಲು ಸೆಪ್ಟೆಂಬರ್ 30 ರವರೆಗೆ ಕಾಲಾವಕಾಶ ನೀಡಿತ್ತು.
Advertisement
ಮೇ 19ರಿಂದ ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ಸುಮಾರು 95% ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿ ಬಂದಿದೆ. ಎಂದರೆ ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ನೋಟುಗಳ ಪೈಕಿ ಸುಮಾರು 3.42 ಲಕ್ಷ ಕೋಟಿ ನೋಟುಗಳನ್ನು ಮರಳಿ ಪಡೆಯಲಾಗಿದೆ. ಇದೀಗ ಕೇವಲ 1.14 ಲಕ್ಷ ಕೋಟಿ ನೋಟುಗಳು ಮಾತ್ರವೇ ಬಾಕಿ ಉಳಿದಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಇದನ್ನೂ ಓದಿ: ನೀರು ಹರಿಸಲು ಸಾಧ್ಯವಿಲ್ಲ; CWMA, ಸುಪ್ರೀಂಗೆ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಸಲ್ಲಿಕೆ
Web Stories