ಮುಂಬೈ: ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 9 ವರ್ಷಗಳ ಬಳಿಕ ಸುಮಾರು 8.46 ಮೆಟ್ರಿಕ್ ಟನ್ ಚಿನ್ನ ಖರೀದಿಸಿದೆ.
ಜೂನ್ 30ಕ್ಕೆ ಅಂತಿಮವಾದ 2017-18 ಆರ್ಥಿಕ ವರ್ಷದ ವರದಿಯಲ್ಲಿ ನೀಡಿರುವ ಮಾಹಿತಿಯಂತೆ ಸದ್ಯ ಖರೀದಿಸುವ ಚಿನ್ನದೊಂದಿಗೆ ಆರ್‌ಬಿಐ ಬಳಿ ಇರುವ ಚಿನ್ನದ ಪ್ರಮಾಣ 566.23 ಮೆಟ್ರಿಕ್ ಟನ್‍ಗೆ ಏರಿಕೆಯಾಗಿದೆ.
Advertisement
Advertisement
2009 ನವೆಂಬರ್ ನಲ್ಲಿ 200 ಮೆಟ್ರಿಕ್ ಟನ್ ಚಿನ್ನವನ್ನು ಅಂತರಾಷ್ಟ್ರಿಯ ಹಣಕಾಸು ನಿಧಿ (ಐಎಂಎಫ್)ನಿಂದ ಖರೀದಿ ಮಾಡಲಾಗಿತ್ತು. ಬಳಿಕ ಕಳೆದ 9 ವರ್ಷಗಳಿಂದ ಯಾವುದೇ ಖರೀದಿ ನಡೆದಿರಲಿಲ್ಲ. ಸದ್ಯ ಆರ್‌ಬಿಐ ಚಿನ್ನ ಖರೀದಿ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಸಾಬೀತು ಪಡಿಸಿದೆ.
Advertisement
ಉಳಿದಂತೆ ಭಾರತದ ಆರ್‌ಬಿಐ ಬಳಿ ಇರುವ ಚಿನ್ನ ಸಂಗ್ರಹದಲ್ಲಿ 292.30 ಟನ್ ಚಿನ್ನವನ್ನು ಮುದ್ರಿಸಿರುವ ನೋಟುಗಳಿಗಾಗಿ ಮೀಸಲಿಡಲಾಗಿದೆ. 273.3 ಟನ್ ಚಿನ್ನ ಬ್ಯಾಂಕಿಂಗ್ ವಿಭಾಗಕ್ಕೆ ಎಂದು ವಿಂಗಡಿಸಲಾಗಿದೆ.
Advertisement
ಯಾವ ದೇಶದಲ್ಲಿ ಎಷ್ಟು ಚಿನ್ನವಿದೆ?
ಹಲವು ರಾಷ್ಟ್ರಗಳು ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಸಿಲು ಹಾಗೂ ತುರ್ತು ಆರ್ಥಿಕ ಸಂದರ್ಭಗಳನ್ನು ಎದುರಿಸಲು ಚಿನ್ನ ಸಂಗ್ರಹಣೆ ಮಾಡುತ್ತದೆ. ಇನ್ನು ಸಂಗ್ರಹಣ ಪ್ರಮಾಣದಂತೆ ಹೇಳುವುದಾದರೆ ವಿಶ್ವದಲ್ಲಿ ಭಾರತ 10ನೇ ಅತಿದೊಡ್ಡ ದೇಶವಾಗಿದೆ. ಅತಿ ಹೆಚ್ಚು ಚಿನ್ನ ಸಂಗ್ರಹಿಸಿದ ರಾಷ್ಟಗಳ ಪಟ್ಟಿಯಲ್ಲಿ ಅಮೆರಿಕ (8,133 ಟನ್), ಜರ್ಮನಿ (3,371), ಇಟಲಿ (2,451), ಫ್ರಾನ್ಸ್ (2,436), ರಷ್ಯಾ (1,909), ಚೀನಾ (1,842), ಸ್ವಿಜರ್ಲೆಂಡ್ (1,040), ಜಪಾನ್ (7,650), ಭಾರತ (566) ಟನ್ ಚಿನ್ನ ಸಂಗ್ರಹಿಸಿದೆ.
ಚಿನ್ನದ ಖರೀದಿಯ ಉದ್ದೇಶವೇನು?
ಬಹುತೇಕ ರಾಷ್ಟ್ರಗಳು ತಮ್ಮ ವಿದೇಶಿ ವಿನಿಮಯ ಸಂಗ್ರಹವನ್ನು ನಿಯಮಿತವಾಗಿ ಕಾಯ್ದುಕೊಳ್ಳುತ್ತಿರುತ್ತದೆ. ಚಿನ್ನ, ಹಣ ಅಥವಾ ಹೂಡಿಕೆ ರೂಪದಲ್ಲಿ ವಿದೇಶಿ ವಿನಿಮಯ ಸಂಗ್ರಹ ಮಾಡಲಾಗುತ್ತದೆ. ರೂಪಾಯಿ ಮೌಲ್ಯ ಕುಸಿತವಾದಾಗ ಅಥವಾ ಆರ್ಥಿಕ ಸಂಕಷ್ಟ ಬಂದಾಗ ಚಿನ್ನವನ್ನು ಒತ್ತೆಯಿಟ್ಟು ಹಣವನ್ನು ತರಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv