ನವದೆಹಲಿ: ಶೀಘ್ರದಲ್ಲೇ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯು (CBDC) ಇ-ರೂಪಾಯಿಯನ್ನು (Digital Rupee) ಪ್ರಾಯೋಗಿಕ ಬಳಕೆ ಪ್ರಾರಂಭಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ತಿಳಿಸಿದೆ.
Advertisement
ಆರ್‌ಬಿಐ ಮತ್ತು ಸಿಬಿಡಿಸಿ ಈಗಾಗಲೇ ಡಿಜಿಟಲ್ ಕರೆನ್ಸಿ (Digital Currency) ಕುರಿತಾಗಿ ಹಲವು ಪ್ರಾಯೋಗಿಕ ಕೆಲಸಗಳಿಗೆ ಕೈ ಹಾಕಿದ್ದು, ಕರೆನ್ಸಿಗಳ ಬಗ್ಗೆ ಮತ್ತು ನಿರ್ದಿಷ್ಟವಾಗಿ ಡಿಜಿಟಲ್ ರೂಪಾಯಿಯ ಯೋಜಿತ ವೈಶಿಷ್ಟ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಈಗಿನಿಂದಲೇ ಪ್ರಯತ್ನಿಸುತ್ತಿದೆ. ನಿರ್ದಿಷ್ಟ ಬಳಕೆಗಾಗಿ ಸಿಬಿಡಿಸಿ ಇ-ರೂಪಾಯಿಯ ಪ್ರಾಯೋಗಿಕ ಬಳಕೆಯನ್ನು ಪ್ರಾರಂಭಿಸಲಿದೆ ಎಂದು ಆರ್‌ಬಿಐ ತಿಳಿಸಿದೆ. ಪ್ರಾಯೋಗಿಕ ಯೋಜನೆಗಳ ವ್ಯಾಪ್ತಿ ವಿಸ್ತರಿಸಿದಂತೆ, ಕಾಲಕಾಲಕ್ಕೆ ಡಿಜಿಟಲ್ ರೂಪಾಯಿಯ ನಿರ್ದಿಷ್ಟ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಕುರಿತು ಆರ್‌ಬಿಐ ಮಾಹಿತಿ ಪಡೆದುಕೊಂಡು ಇ-ರೂಪಾಯಿ ಕುರಿತಾಗಿ ದೇಶದಲ್ಲಿ ಮತ್ತಷ್ಟು ಕಾರ್ಯರೂಪಗಳೊಂದಿಗೆ ಜಾರಿಗೆ ತರಲು ಚಿಂತಿಸಿದೆ. ಇದನ್ನೂ ಓದಿ: ರಾಜಕೀಯವನ್ನು ರಾಜಕೀಯ ಮೈದಾನದಲ್ಲೇ ಮಾಡಬೇಕು, ಸರ್ಕಾರಿ ಕಚೇರಿಗಳಲ್ಲಲ್ಲ: ಡಿಕೆಶಿ
Advertisement
Advertisement
ಇ-ರೂಪಾಯಿಯು ಬ್ಯಾಂಕ್ ನೋಟುಗಳಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಆದರೆ ಡಿಜಿಟಲ್ ರೂಪದಲ್ಲಿರುವುದರಿಂದ ಆಗಿರುವುದರಿಂದ ಇದು ತುಂಬಾ ಸರಳ, ವೇಗ ಮತ್ತು ಅಗ್ಗವಾಗುವ ಸಾಧ್ಯತೆಯಿದೆ. ಡಿಜಿಟಲ್ ಹಣದ ಇತರ ರೂಪಗಳ ಎಲ್ಲಾ ವಹಿವಾಟಿನ ಪ್ರಯೋಜನಗಳನ್ನೂ ಇದು ಹೊಂದಲಿದ್ದು, ಈ ಮೂಲಕ ಗ್ರಾಹಕರಿಗೆ ಇನ್ನಷ್ಟು ಡಿಜಿಟಲ್ ಸೇವೆಗಳನ್ನು ನೀಡಲು ಮುಂದಾಗಿದ್ದೇವೆ ಎಂದು ಆರ್‌ಬಿಐ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್
Advertisement
2022-23ರ ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಜಿಟಲ್ ಕರೆನ್ಸಿಯನ್ನು ಹೊರತರಲಿದೆ ಎಂದು ಹೇಳಿದ್ದರು. ಇದೀಗ ಆರ್‌ಬಿಐ ಡಿಜಿಟಲ್ ಕರೆನ್ಸಿ ಹೊರತರಲು ಸಿದ್ಧವಾಗಿದೆ.