ಬೆಳಗಾವಿ: ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ (Sangolli Rayanna) ಭಾವಚಿತ್ರವೇ ಮಾಯವಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ರಾಯಣ್ಣನ ಫೋಟೋ (Photo) ಹಾಕದಿದ್ದಕ್ಕೆ ರಾಯಣ್ಣನ ಅಭಿಮಾನಿಗಳು ಅಸಮಾಧಾನ ಹೊರಹಾಕಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ವೀರರಾಣಿ ಚೆನ್ನಮ್ಮನ (Kittur Rani Chennamma) ಉತ್ಸವವನ್ನು ಇದೇ ಮೊದಲ ಬಾರಿಗೆ ಸರ್ಕಾರ ರಾಜ್ಯಮಟ್ಟದ ಕಿತ್ತೂರು ಉತ್ಸವ ಆಚರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭರದ ಸಿದ್ಧತೆ ಮಾಡಿಕೊಂಡಿದೆ. ಆದರೆ, ರಾಜ್ಯಮಟ್ಟದ ಕಿತ್ತೂರು ಉತ್ಸವ ಆಮಂತ್ರಣ ಪತ್ರಿಕೆಯಲ್ಲಿ ಸಾಲು ಸಾಲು ಅದ್ವಾನ ಆರೋಪ ಕೇಳಿಬಂದಿದೆ.
Advertisement
Advertisement
ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬಲಗೈ ಬಂಟ ರಾಯಣ್ಣನ ಫೋಟೋ ಹಾಕದಿದ್ದಕ್ಕೆ ಬೆಳಗಾವಿ (Belagavi) ಜಿಲ್ಲಾಡಳಿತದ ವಿರುದ್ಧ ರಾಯಣ್ಣನ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಅ. 23 ರಿಂದ 3 ದಿನಗಳ ಕಾಲ ರಾಜ್ಯಮಟ್ಟದ ಕಿತ್ತೂರು ಉತ್ಸವ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಪರಿವರ್ತನೆಗೊಂಡಿದೆ. ಆದರೆ, ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ಶಾಸಕ ಮಹಾಂತೇಶ್ ದೊಡ್ಡಗೌಡರ ಪತ್ನಿಯ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಾರೆ.
Advertisement
Advertisement
ಮಹಿಳಾ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಗೌರವ ಉಪಸ್ಥಿತಿಯಾಗಿ ಶಾಸಕ ಮಹಾಂತೇಶ್ ದೊಡ್ಡಗೌಡರ ಪತ್ನಿ ಮಂಜುಳಾ ದೊಡ್ಡಗೌಡರಿಗೆ ಸ್ಥಾನ ನೀಡಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಪಂಚಮಸಾಲಿ ಎರಡೂ ಪೀಠಗಳ ಸ್ವಾಮೀಜಿಗಳ ಹೆಸರು ಹಾಕದಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಖರ್ಗೆಗೆ ಭರ್ಜರಿ ಗೆಲುವು – 24 ವರ್ಷಗಳ ಬಳಿಕ ಗಾಂಧೀಯೇತರ ವ್ಯಕ್ತಿಗೆ ಕಾಂಗ್ರೆಸ್ ಪಟ್ಟ
ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದು ಶಾಸಕರ ಹೆಸರು ಓಕೆ, ಅವರ ಪತ್ನಿಯ ಹೆಸರು ಆಹ್ವಾನ ಪತ್ರಿಕೆಯಲ್ಲಿ ಏಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಮ್ಮನನ್ನು ಜೈಲಿಗೆ ಹಾಕಿ ಎಂದ ಪುಟ್ಟ ಕಂದಮ್ಮನಿಗೆ ಸಚಿವರಿಂದ ದೀಪಾವಳಿ ಗಿಫ್ಟ್