ಬೆಂಗಳೂರು: ಹಸಿ ಮಾಂಸ ಇರುವ ಪ್ಲೇಟಿನಿಂದ ಕೋಳಿ ಎಂದು ಹೇಳಲಾಗುತ್ತಿರುವ ಪ್ರಾಣಿ ತೆವಳುತ್ತಾ ನೆಲಕ್ಕೆ ಬೀಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಸತ್ಯವೋ ಸುಳ್ಳೋ ಎನ್ನುವುದರ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಕೆಲವರು ಇದು ನಿಜವಾಗಿ ನಡೆದಿದೆ ಎಂದು ಹೇಳಿದರೆ ಮತ್ತೆ ಕೆಲವರು ಎಡಿಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ.
ಕೆಲವೊಂದು ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಗಳು ಇದು ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದೆ ಎಂದು ಹೇಳಿದ್ದರೆ ಕೆಲ ಇಂಗ್ಲೀಷ್ ತಾಣಗಳು ಹಾಂಕಾಂಗ್ ನಲ್ಲಿ ಮೊದಲು ವಿಡಿಯೋ ಅಪ್ಲೋಡ್ ಆಗಿದೆ ಎಂದು ಹೇಳಿವೆ.
https://twitter.com/lizardtoess/status/1154973048937832448
ಪ್ರಾಣಿ ಶಾಸ್ತ್ರಜ್ಞರು ಇದು ಕೋಳಿಯೂ ಅಲ್ಲ ಕಪ್ಪೆಯೂ ಅಲ್ಲ. ಮೀನು ಆಗಿರುವ ಸಾಧ್ಯತೆಯಿದೆ. ತೆವಳುತ್ತಾ ಹಾರಬೇಕಾದರೆ ಮೀನು ಮಾತ್ರ ಆಗಿರಬೇಕು. ಚರ್ಮ ತೆಗೆದ ಮೀನು ಈ ರೀತಿ ಹಾರಿರಬಹುದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇದು ನೈಜವೋ? ಎಡಿಟೆಡ್ ವಿಡಿಯೋ ಎನ್ನುವುದರ ಬಗ್ಗೆ ಗೊಂದಲವಿದೆ. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ ತಿಳಿಸಿ.