ಧಾರವಾಡ: ಮಾದಕ ವಸ್ತುಗಳ ವಿರುದ್ಧ ವಿರುದ್ಧ ನಾವು ಸಮರ ಸಾರಿದ್ದೇವೆ. ಕರ್ನಾಟಕದಲ್ಲಿ 10,000ಕ್ಕೂ ಹೆಚ್ಚು ಜನ ವಿದೇಶಿಗರಿದ್ದಾರೆ. ಅದರಲ್ಲಿ ಅನೇಕರು ಡ್ರಗ್ಸ್ ಜಾಲಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwara) ಹೇಳಿದರು.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ವಿದೇಶಿಗರನ್ನ ಫರ್ಮನೆಂಟ್ ಆಗಿ ಮಾನಿಟರ್ ಮಾಡುತ್ತಿದ್ದೇವೆ. ನೂರಕ್ಕೂ ಹೆಚ್ಚು ಜನರನ್ನ ಆಯಾ ದೇಶಕ್ಕೆ ವಾಪಸ್ ಕಳುಹಿಸುತ್ತೇವೆ. ಕೆಲವರನ್ನ ಡಿಟೆಸೆನ್ಸ್ ಕೇಂದ್ರಗಳಲ್ಲಿ ಇಟ್ಟುಕೊಂಡಿದ್ದೇವೆ ಎಂದರು. ಇದನ್ನೂ ಓದಿ: ಧಾರವಾಡ| ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ
ಆಯಾ ದೇಶಗಳ ರಾಯಭಾರ ಕಚೇರಿಯವರ ಕ್ಲಿಯರೆನ್ಸ್ ಕೇಳಿ ವಾಪಸ್ ಕಳುಹಿಸುತ್ತೇವೆ ಎಂದ ಗೃಹಸಚಿವರು ಕೇಂದ್ರ ಸರ್ಕಾರದ ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿವೆ? RAW, IB ದವರು ವಿದೇಶಿಗರನ್ನು ಹಿಡಿದು ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಸರ್ವರ್ ಸಮಸ್ಯೆ; ಚೆಕ್-ಇನ್, ಫ್ಲೈಟ್ ಕಾರ್ಯಾಚರಣೆಯಲ್ಲಿ ತೊಂದರೆ
ಆನೇಕಲ್ ಬಳಿ ನಾಲ್ಕು ಜನರನ್ನು ಹಿಡಿದಿದ್ವಿ, ನಾಲ್ಕು ಜನ ನಮ್ಮ ರಾಜ್ಯಕ್ಕೆ ಬಂದು ಒಂದು ವರ್ಷ ಆಯ್ತು. ಆದರೆ ಅವರು ದೇಶಕ್ಕೆ ಬಂದು 10 ವರ್ಷ ಆಗಿದೆ. ನಮ್ಮ ಪೊಲೀಸರೇ ಅವರನ್ನು ಹಿಡಿದು IB ದವರಿಗೆ ಮಾಹಿತಿ ಕೊಟ್ಟಿದ್ದಾರೆ. ಹಿಂದೆ ಸಹ ಒಬ್ಬ ಹಾಗೆಯೇ ಮಾಡಿದ್ದ, ಅಂಗಡಿಗಳ ಮಧ್ಯೆ ಅಂಗಡಿ ಇಟ್ಟುಕೊಂಡಿದ್ದ, ಆತನನ್ನು ಪತ್ತೆ ಮಾಡಿದ್ವಿ. ಇಂತಹ ವಿಚಾರಗಳ ಬಗ್ಗೆ ಕರ್ನಾಟಕ ಪೊಲೀಸರಿಗೆ IB ದವರು ಮಾಹಿತಿ ಕೊಡಬೇಕು ಎಂದು ಹೇಳಿದ್ದಾರೆ.