ಲಂಡನ್: ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ರವೀಂದ್ರ ಜಡೇಜಾ ಟೂರ್ನಿಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯ 2 ಪಂದ್ಯಗಳನ್ನು ಆಡಿರುವ ಜಡೇಜಾ ಒಟ್ಟು 41 ರನ್ ಗಳನ್ನು ಸೇವ್ ಮಾಡುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಆಟಗಾರರು ಗಾಯಗೊಂಡಾಗ, ಬೌಲರ್ ವಿಶ್ರಾಂತಿ ಪಡೆದಾಗ ಕ್ಷೇತ್ರ ರಕ್ಷಣೆಯಲ್ಲಿ ಮೋಡಿ ಮಾಡಿರುವ ಜಡೇಜಾ ಇನ್ನರ್ ರಿಂಗ್ ನಲ್ಲಿ 24 ರನ್ ಗಳನ್ನು ತಡೆದಿದ್ದರೆ, ಔಟ್‍ಫೀಲ್ಡ್‍ನಲ್ಲಿ 17 ರನ್ ಗಳನ್ನು ಸೇವ್ ಮಾಡಿದ್ದಾರೆ. 2 ಪಂದ್ಯಗಳಲ್ಲಿ ಜಡೇಜಾ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಮಾರ್ಟಿನ್ ಗುಪ್ಟಿಲ್ 9 ಪಂದ್ಯಗಳಿಂದ 34 ರನ್, ಗ್ಲೇನ್ ಮ್ಯಾಕ್ಸ್ ವೇಲ್ 9 ಪಂದ್ಯಗಳಿಂದ 32 ರನ್, 4ನೇ ಸ್ಥಾನದಲ್ಲಿ ಇರುವ ಸ್ಟೋಯಿನ್ಸ್ 7 ಪಂದ್ಯಗಳಿಂದ 27 ರನ್‍ಗಳನ್ನು ಸೇವ್ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಜಡೇಜಾ – ಧೋನಿ ವಿರೋಧಿ ತಂಡ ಒಟ್ಟು 29 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಭಾರತ ಪರ ನಯನ್ ಮೋಗಿಯಾ ಹಾಗೂ ವೆಂಕಟೇಶ್ ಪ್ರಸಾದ್ ಜೋಡಿ 28 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದಿತ್ತು. ಉಳಿದಂತೆ ಈ ಪಟ್ಟಿಯಲ್ಲಿ 25 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದ ಧೋನಿ – ಹರ್ಭಜನ್ ಜೋಡಿ 3ನೇ ಸ್ಥಾನದಲ್ಲಿದೆ.
That direct hit by Jadeja broke the stumps into bits and pieces.#BringItHome #INDvNZ ICC #CWC19 @imjadeja pic.twitter.com/hjdflg7tzc
— Disney+ Hotstar (@DisneyPlusHS) July 10, 2019
https://twitter.com/mohankrish_mk48/status/1148902745845272576