ಕ್ರೇಜಿಸ್ಟಾರ್ ರವಿಚಂದ್ರನ್ ಅಂದಾಕ್ಷಣ ಥಟ್ಟನೆ ನೆನಪಾಗೋ ಸಿನಿಮಾ ಪ್ರೇಮಲೋಕ. ಕನ್ನಡ ಚಿತ್ರ ಜಗತ್ತಲ್ಲಿ ಈ ಚಿತ್ರಕ್ಕೆ ತನ್ನದೇ ಆದ ಮಹತ್ವವಿದೆ. ಹಲವು ದಾಖಲೆಗಳನ್ನು ಮಾಡಿರುವ ಸಿನಿಮಾ ಇದಾಗಿದೆ. ಈಗ ರವಿಚಂದ್ರನ್ ಆ ಸಿನಿಮಾದ ಎರಡನೇ ಭಾಗವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಇಬ್ಬರೂ ಮಕ್ಕಳಿಗೆ ಪಾತ್ರ ಕೊಟ್ಟಿದ್ದಾರೆ. ಆ ಪಾತ್ರಕ್ಕಾಗಿ ತಯಾರಿ ಕೂಡ ಮಾಡಿಸುತ್ತಿದ್ದಾರೆ.
Advertisement
ಪ್ರೇಮಲೋಕ 2 ಚಿತ್ರಕ್ಕಾಗಿ ಡಾನ್ಸ್ ಮತ್ತು ಮೈ ಹುರಿಗೊಳಿಸಿಕೊಳ್ಳುತ್ತಿರುವೆ. ಅಪ್ಪನೇ ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರೇಮಲೋಕ ಸಿನಿಮಾದ ಹೆಸರೇ ದೊಡ್ಡದು. ಹಾಗಾಗಿ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತೇನೆ ಎನ್ನುತ್ತಾರೆ (Manoranjan) ಮನೋರಂಜನ್.
Advertisement
Advertisement
ರವಿಚಂದ್ರನ್ (Ravichandran) ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2 ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ‘ಪ್ರೇಮಲೋಕ 2’ (Premaloka 2) ಸಿನಿಮಾವನ್ನು ಆರಂಭಿಸುತ್ತೇನೆ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಕ್ರೇಜಿ ಸ್ಟಾರ್ ತಿಳಿಸಿದ್ದಾರೆ.
Advertisement
‘ಪ್ರೇಮಲೋಕ 2’ ಸಿನಿಮಾದಲ್ಲಿ ಬರೀ 20-25 ಹಾಡುಗಳು ಇರುತ್ತೆದೆ ಅಷ್ಟೇ. ಆದರೆ ಜೀವನಪೂರ್ತಿ ಇಡೀ ಸಿನಿಮಾ ಚಿಕ್ಕವರಿಂದಿಡಿದು ದೊಡ್ಡವರ ತನಕ ಎಲ್ಲರಿಗೂ ಕಾಡುತ್ತದೆ. ಈ ಸಿನಿಮಾದಲ್ಲಿ ಪ್ರೀತಿ ಇದೆ, ಜಾತಿ ಇಲ್ಲ. ಭೇದ ಭಾವ ಇಲ್ಲ, ಹಣದ ಕುರಿತು ಇಲ್ಲ. ಇದೇ ಬೇರೆ ಥರದ ಕಥೆ ಇರುವ ಸಿನಿಮಾ. ನನಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಕಥೆ ನಡೆಯೋದು ಜನರ ಮಧ್ಯೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸೋ ಅವಕಾಶ ಇದೆ. ಆ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ, ನನ್ನ ಇನ್ಸ್ಟಾಗ್ರಾಂ ಅಕೌಂಟ್ಗೆ ಫ್ಯಾಮಿಲಿ ಫೋಟೋ ಶೇರ್ ಮಾಡಿ ಬನ್ನಿ. ನಾನು ಅವರನ್ನು ಕರೆಸಿ ಶೂಟ್ ಮಾಡುತ್ತೇನೆ ಎಂದಿದ್ದಾರೆ. ಹೊಸಬರಿಗೆ ಓಪನ್ ಆಫರ್ ಕೊಟ್ಟಿದ್ದಾರೆ ರವಿಚಂದ್ರನ್.