ನವದೆಹಲಿ: ಕೊರೊನಾ ವಿರುದ್ಧ ಜನರಿಗೆ ಜಾಗೃತಿ ಮೂಡಿಸಲು ಟೀಂ ಇಂಡಿಯಾದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್, ತಮ್ಮ ಟ್ವಿಟ್ಟರ್ ಖಾತೆಯ ಹೆಸರನ್ನು ಬದಲಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಸೂಚನೆ ಕೂಡ ಕೊಟ್ಟಿದೆ. ಈಗ ಇದೇ ವಿಚಾರಕ್ಕೆ ಅಶ್ವಿನ್ ಕೂಡ ತಮ್ಮ ಟ್ವಿಟ್ಟರ್ ಖಾತೆ ಹೆಸರನ್ನು ಮನೆಯಲ್ಲೇ ಇರಿ ಇಂಡಿಯಾ (ಲೆಟ್ಸ್ ಸ್ಟೇ ಇಂಡೋರ್ಸ್ ಇಂಡಿಯಾ) ಎಂದು ಚೇಂಜ್ ಮಾಡಿದ್ದಾರೆ.
Advertisement
Advertisement
ಇದರ ಜೊತೆಗೆ ದೇಶದ ಜನರಿಗೆ ಕೊರೊನಾ ವಿರುದ್ಧ ಹೋರಾಡಲು ಕರೆಕೊಟ್ಟಿರುವ ಅಶ್ವಿನ್, ಅಧಿಕೃತವಾದ ಮತ್ತು ಭೀತಿಗೆ ಒಳಪಡಿಸುವ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡಾಗ ನಮಗೆ ಒಂದು ವಿಷಯ ನಿಶ್ಚಿತ ಎಂದು ತೋರುತ್ತದೆ. ನಮಗೆ ಮುಂದಿನ ಎರಡು ವಾರಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಮುಂದಿನ ಎರಡು ವಾರ ಭಾರತದ ಪ್ರತಿಯೊಂದು ನಗರವು ನಿರ್ಜನವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಕೊರೊನಾ ಹೆಚ್ಚಾಗಿ ಅದೂ ಅಪಾಯಕಾರಿಯಾದ ಹಂತ ತಲುಪಬಹುದು ಎಂದು ಟ್ವೀಟ್ ಮಾಡಿದ್ದಾರೆ.
Advertisement
Taking in all information ( both authentic and some seemingly panicky ones) . One thing seems certain “ The next 2 weeks are going to be extremely crucial” . Every city in India should literally feel deserted for the next 2 weeks, cos if this escalates it will be mayhem. #COVID19
— Ashwin ???????? (@ashwinravi99) March 23, 2020
Advertisement
ನಮ್ಮ ದೇಶ ಹೆಚ್ಚು ಜನ ಇರುವ ದೇಶವಾಗಿದ್ದು, ಇದರ ಬಗ್ಗೆ ಎಲ್ಲರಿಗೂ ಮಾಹಿತಿ ಇರುವುದಿಲ್ಲ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಭಾನುವಾರ ಮೋದಿ ಅವರು ಕರೆಕೊಟ್ಟಿದ ಜನಾತಾ ಕಫ್ರ್ಯೂವನ್ನು ಬೆಂಬಲಿಸಿ ಮಾತನಾಡಿದ್ದ, ಅಶ್ವಿನ್ ಜನರು ಇದೇ ರೀತಿಯ ಸಾಮಾಜಿಕವಾಗಿ ದೂರು ಉಳಿಯುವ ಪ್ರಕ್ರಿಯೇ ಹೀಗೆ ಮುಂದುವರೆಯಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದರು.
We need to remember we are a densely populated country and a very large part of them don’t have access to information.
— Ashwin ???????? (@ashwinravi99) March 23, 2020
ಇಂದು ರಾತ್ರಿ 8 ಗಂಟೆಗೆ ಕೊರೊನಾ ವೈರಸ್ ವಿಚಾರವಾಗಿ ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿಲಿದ್ದಾರೆ. ದೇಶದಲ್ಲಿ ರೈಲುಗಳು ಮತ್ತು ಕೆಲ ಮಹಾನಗರಗಳಲ್ಲಿ ಬಸ್ಸುಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ವಿಮಾನಯಾನ ಕೂಡ ಬಂದ್ ಆಗಿದೆ. ಮಾಹಾಮಾರಿ ಕೊರೊನಾ ವೈರಸ್ ನಿಂದ ಭಾರತದಲ್ಲಿ ಇಲ್ಲಿಯವರೆಗೂ 10 ಮಂದಿ ಸಾವನ್ನಪ್ಪಿದ್ದಾರೆ.