ಚೆನ್ನೈ: ಜ.22ರಂದು ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ (Prana Pratishtha) ಪಾಲ್ಗೊಳ್ಳಲು ಭಾರತ ತಂಡ ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರಿಗೆ (Ravichandran Ashwin) ಆಹ್ವಾನ ನೀಡಲಾಗಿದೆ.
ಚೆನ್ನೈನಲ್ಲಿರುವ ಅಶ್ವಿನ್ ಅವರ ನಿವಾಸದಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಎಸ್.ಜಿ.ಸೂರ್ಯ ಮತ್ತು ಉಪಾಧ್ಯಕ್ಷ ವೆಂಕಟರಾಮನ್ ಸಿ ಅವರು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಆಹ್ವಾನ ನೀಡಿದರು. ಇದಕ್ಕೂ ಮುನ್ನ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಮುಂಬೈ ನಿವಾಸದಲ್ಲಿ, ವಿಶಾಖಪಟ್ಟಣದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಯನ್ನು ಆಹ್ವಾನಿಸಲಾಗಿತ್ತು. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್ – ಜೈ ಶ್ರೀರಾಮ್ ಘೋಷಣೆ
Advertisement
Advertisement
ಇನ್ನೂ 2024 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗೆ ಸಜ್ಜಾಗಲು ರಾಂಚಿಯಲ್ಲಿ ತರಬೇತಿ ಪಡೆಯುತ್ತಿರುವ ಸಿಎಸ್‍ಕೆ ತಂಡದ ನಾಯಕ ಎಂಎಸ್ ಧೋನಿ ಅವರನ್ನು ಇತ್ತೀಚೆಗೆ ಆರ್‍ಎಸ್‍ಎಸ್ ಸಹ-ಪ್ರಾಂತೀಯ ಕಾರ್ಯದರ್ಶಿ ಧನಂಜಯ್ ಸಿಂಗ್ ಮತ್ತು ಜಾಖರ್ಂಡ್ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕರ್ಮವೀರ್ ಸಿಂಗ್ ಭೇಟಿಯಾಗಿ ಆಹ್ವಾನ ನೀಡಿದ್ದರು.
Advertisement
Advertisement
ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ನಡೆದಿದೆ. ಈಗಾಗಲೆ ಪದ್ಮಪೀಠದ ಮೇಲೆ ನಿಂತ ರಾಮನ ವಿಗ್ರಹದ ಚಿತ್ರವನ್ನು ರಾಮಜನ್ಮಭೂಮಿ ಟ್ರಸ್ಟ್ ಬಿಡುಗಡೆಗೊಳಿಸಿದ್ದು, ದೇಶದೆಲ್ಲೆಡೆ ರಾಮಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನಮ್ಮೂರ ಹುಡುಗ ಲೋಕಸಭೆಗೆ ಸ್ಪರ್ಧಿಸಿ ಮತ್ತೆ ಸೋಲೋದು ಇಷ್ಟವಿಲ್ಲ: ಸುಧಾಕರ್‌ಗೆ ಪ್ರದೀಪ್ ಈಶ್ವರ್ ಟಾಂಗ್