ಮಾಸ್ ಮಹಾರಾಜ ರವಿತೇಜ (Ravi Teja) ನಟನೆಯ ‘ಮಿಸ್ಟರ್ ಬಚ್ಚನ್’ (Mr. Bachchan) ಸಿನಿಮಾ ಥಿಯೇಟರ್ನಲ್ಲಿ ಮಕಾಡೆ ಮಲಗಿದೆ. ಇದರಿಂದ ನಿರ್ಮಾಪಕರಿಗೂ ಭಾರೀ ನಷ್ಟವಾದ ಹಿನ್ನೆಲೆ 4 ಕೋಟಿ ರೂ. ಸಂಭಾವನೆಯನ್ನು ರವಿತೇಜ ಹಿಂದಿರುಗಿಸಿದ್ದಾರೆ. ಇದನ್ನೂ ಓದಿ:ಠಾಣೆಯಲ್ಲಿ ಕೊಲೆ ಆರೋಪಿ ಪವಿತ್ರಾಗೌಡ ಕಣ್ಣೀರು – ಫೋಟೋ ರಿವೀಲ್
Advertisement
ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಚಿತ್ರವನ್ನು ಹರೀಶ್ ಶಂಕರ್ ನಿದೇಶನ ಮಾಡಿದ್ದು, ಆ.15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. 85 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ ಅರ್ಧ ಭಾಗದಷ್ಟು ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ. ಇದರಿಂದ ನಿರ್ಮಾಣ ಸಂಸ್ಥೆ ನಷ್ಟ ಅನುಭವಿಸಿದೆ. ಈ ಹಿನ್ನೆಲೆ ತಾವು ಪಡೆದುಕೊಂಡ ಸಂಭಾವನೆಯಲ್ಲಿ 4 ಕೋಟಿ ರೂ. ನಟ ರವಿತೇಜ ಹಿಂದಿರುಗಿಸಿದ್ರೆ, ಇತ್ತ ನಿರ್ದೇಶಕ ಹರೀಶ್ ಕೂಡ 2 ಕೋಟಿ ರೂ.ವನ್ನು ನಿರ್ಮಾಪಕರಿಗೆ ನೀಡಿದ್ದಾರೆ.
Advertisement
Advertisement
ಸಿನಿಮಾ ಸೋಲಿನ ಹೊರೆಯನ್ನು ನಿರ್ಮಾಪಕರಿಗೆ ಕಮ್ಮಿ ಮಾಡಲು ರವಿತೇಜ ಮತ್ತು ನಿರ್ದೇಶಕ ಹರೀಶ್ ಸಂಭಾವನೆಯನ್ನು ಹಿಂದಿರುಗಿಸುವ ಮೂಲಕ ಸಾಥ್ ನೀಡಿದ್ದಾರೆ. ಇದೀಗ ಇಬ್ಬರ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಅಂದಹಾಗೆ, ರಾಮ್ ಪೋತಿನೇನಿ ನಟನೆಯ `ಇಸ್ಮಾರ್ಟ್ ಶಂಕರ್’ ಮುಂದೆ ‘ಮಿಸ್ಟರ್ ಬಚ್ಚನ್’ ಚಿತ್ರ ಆ.15ರಂದು ರಿಲೀಸ್ ಆಗಿತ್ತು. ರವಿತೇಜಗೆ ನಾಯಕಿಯಾಗಿ ಭಾಗ್ಯಶ್ರೀ ನಟಿಸಿದ್ದರು. ಇದು ಬಾಲಿವುಡ್ನ ‘ರೈಡ್’ ಸಿನಿಮಾದ ರಿಮೇಕ್ ಆಗಿದೆ.