ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನ ಕರ್ನಾಟಕ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಇದೀಗ ಬೇರೆ ರಾಜ್ಯದ ತನಿಖಾ ತಂಡಗಳು ಡಾನ್ ರವಿ ಪೂಜಾರಿಯನ್ನ ವಶಕ್ಕೆ ಪಡೆಯಲು ನಾ ಮುಂದು ಎಂದು ಸರದಿ ಸಾಲಿನಲ್ಲಿ ನಿಂತಿವೆ.
ಬೆಂಗಳೂರು, ಮಂಗಳೂರು ಪೊಲೀಸರ ತನಿಖೆ ಮುಗಿಯುತ್ತಿದ್ದಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದರು. ಈಗ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಮುಂಬೈ ಪೊಲೀಸರಿಗೂ ಮೊದಲೇ ರವಿ ಪೂಜಾರಿಯನ್ನ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ‘ಪವರ್’ಫುಲ್ ವ್ಯಕ್ತಿಗೆ ಒಂದು ಕರೆ – ಡಾನ್ ರವಿ ಪೂಜಾರಿ ಅರೆಸ್ಟ್
Advertisement
Advertisement
ಡಾನ್ ರವಿ ಪೂಜಾರಿ 2018ರಲ್ಲಿ ಮಲಿಯಾಳಂ ನಟಿ ಒಬ್ಬರನ್ನ ಬೆದರಿಕೆ ಹಾಕಿದ್ದಲ್ಲದೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರ ಬಗ್ಗೆ ಕೇರಳದಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಬೆದರಿಕೆ ಕರೆ ದಾಖಲಿಸಿಕೊಂಡಿರುವ ಕೇರಳ ಪೊಲೀಸರು ಭಾನುವಾರ ಬೆಂಗಳೂರಿಗೆ ಬಂದು ಸಿಸಿಬಿ ಪೊಲೀಸರ ಜೊತೆ ಮಾತುಕತೆ ನಡೆಸಿ ಹೋಗಿದ್ದಾರೆ. ಇದನ್ನೂ ಓದಿ: ಭೂಗತ ಪಾತಕಿ ರವಿ ಪೂಜಾರಿಗೆ ಮಗಳ ಭವಿಷ್ಯದ್ದೇ ಚಿಂತೆ
Advertisement
Advertisement
ಸಿಸಿಬಿ ಪೊಲೀಸ್ ಡಾನ್ ರವಿ ಪೂಜಾರಿಯನ್ನ ಎಷ್ಟು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ರವಿಪೂಜಾರಿ ಪೊಲೀಸರ ಕಸ್ಟಡಿ ಮುಗಿದ ಬಳಿಕ ಮತ್ತೆ ಕಸ್ಟಡಿಗೆ ಪಡೆಯುತ್ತಾರೋ ಅಥವಾ ನ್ಯಾಯಾಂಗ ಬಂಧನಕ್ಕೆ ಕಳಿಸಿಕೊಡುತ್ತಾರೋ ಎಂಬುದರ ಬಗ್ಗೆ ಮಾಹಿತಿ ಪಡೆದು ಹೋಗಿದ್ದಾರೆ.
ಆರೋಪಿ ರವಿ ಪೂಜಾರಿ ಪೊಲೀಸ್ ಕಸ್ಟಡಿ ಮುಗಿಯುತ್ತಿದ್ದಂತೆ ನ್ಯಾಯಾಂಗ ಬಂಧನಕ್ಕೆ ಕೊಟ್ಟರೆ ಬಾಡಿ ವಾರೆಂಟ್ ಮೇಲೆ ಕೇರಳಕ್ಕೆ ಕರೆದುಕೊಂಡು ಹೋಗಲು ಕೇರಳ ಪೊಲೀಸರು ತುದಿಗಾಲಿನಲ್ಲಿ ನಿಂತಿದ್ದಾರೆ.