ಬೆಂಗಳೂರು: ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಬಂದ ರವಿ ಡಿ ಚೆನ್ನಣ್ಣನವರ್ ಇಂದು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಮೈಸೂರು ಎಸ್‍ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಡಿ ಚೆನ್ನಣ್ಣವನರ್ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಇಂದು ಪಶ್ಚಿಮ ವಿಭಾಗದ ಡಿಸಿಪಿ ಎಮ್.ಎನ್ ಅನುಚೇತ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ರವಿ ಡಿ ಚೆನ್ನಣ್ಣನವರ್ ಮಾತನಾಡಿ, ಬೆಂಗಳೂರು ನನಗೆ ತುಂಬಾ ಪರಿಚಯವಿದ್ದು, ನಾನೂ ಜ್ಞಾನಭಾರತಿ ಯೂನಿವರ್ಸಿಟಿಯಲ್ಲಿ ಓದಿದ್ದೆ ಎಂದು ಹೇಳಿದರು. ಸಿಐಡಿಯಲ್ಲಿ ಕೆಲಸ ಮಾಡಿದ್ದು, ಬಿ.ಕೆ ಸಿಂಗ್. ಸುನೀಲ್ ಕುಮಾರ್ ನಂತವರ ಜೊತೆ ಕೆಲಸ ಮಾಡಿದ್ದೇನೆ ಎಂದರು.
ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿ ಬೇಸಿಕ್ ಪೊಲೀಸಿಂಗ್ ಆಡಳಿತ ನಡೆಸುತ್ತೇನೆ ಎಂದು ತಿಳಿಸಿದರು.