-ಕೆಜಿಎಫ್ 2ಗೆ ರವೀನಾ ಎಂಟ್ರಿ
ಬೆಂಗಳೂರು: ನಟ ಯಶ್ ನಟನೆಯ ಕೆಜಿಎಫ್ ಚಿತ್ರ ಇಡೀ ಚಿತ್ರರಂಗದಲ್ಲೇ ಧೂಳೆಬ್ಬಿಸಿತ್ತು. ಇದೀಗ ಕೆಜಿಎಫ್-ಚಾಪ್ಟರ್ 2 ಮೇಲೆ ಸಿನಿರಸಿಕರ ಚಿತ್ತ ನೆಟ್ಟಿದೆ. ಸದ್ಯ ಕೆಜಿಎಫ್ ಅಂಗಳಕ್ಕೆ ಬಾಲಿವುಡ್ ಚೆಲುವೆ ರವೀನಾ ಟಂಡನ್ ಎಂಟ್ರಿ ನೀಡಿದ್ದಾರೆ. ಚಿತ್ರತಂಡ ಟ್ವಿಟ್ಟರ್‍ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ರವೀನಾ ಟಂಡನ್ ನಿಂತಿರುವ ಫೋಟೋವನ್ನು ಹಂಚಿಕೊಂಡು ಸ್ವಾಗತ ಕೋರಿದ್ದಾರೆ.
The lady who issues the death warrant has arrived!!!
Welcome onboard the most energetic @TandonRaveena for #KGFChapter2. pic.twitter.com/gyHhsUiYsC
— Hombale Films (@hombalefilms) February 9, 2020
ಮೊದಲು ಎಕ್ಸೆಲ್ ಎಂಟರ್ ಟೈನ್‍ಮೆಂಟ್ ಟ್ವಿಟ್ಟರ್ ನಲ್ಲಿ ರವೀನಾ ಮತ್ತು ಪ್ರಶಾಂತ್ ನೀಲ್ ಜೊತೆಗಿನ ಫೋಟೋ ಹಂಚಿಕೊಂಡು, ಡೆತ್ ವಾರೆಂಟ್ ಜಾರಿ ಮಾಡಲು ಬಂದ ಶಕ್ತಿಶಾಲಿ ಮಹಿಳೆಗೆ ಕೆಜಿಎಫ್ -2 ಸಿನಿಮಾ ಅಂಗಳಕ್ಕೆ ಸ್ವಾಗತ ಎಂದು ಬರೆದು ಚಿತ್ರತಂಡದ ಇತರರಿಗೂ ಟ್ಯಾಗ್ ಮಾಡಿದ್ದಾರೆ. ಟ್ವೀಟಿಗೆ ಪ್ರತಿಕ್ರಿಯಿಸಿರುವ ನಟಿ ಶ್ರೀನಿಧಿ ಶೆಟ್ಟಿ, ತುಂಬಾ ಉತ್ಸುಕಳಾಗಿದ್ದೇನೆ ಎಂದು ಬರೆದು ವೆಲ್ ಕಮ್ ಮಾಡಿಕೊಂಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ರವೀನಾ ಟಂಡನ್ ಅವರಿಗೆ ಆತ್ಮೀಯ ಸ್ವಾಗತ ಎಂದು ಬರೆದುಕೊಂಡಿದ್ದಾರೆ.
https://twitter.com/VKiragandur/status/1226386677884579840
ಕೆಜಿಎಫ್-2 ಸಿನಿಮಾದಲ್ಲಿ ಬಾಲಿವುಡ್ ಖಳನಾಯಕ್ ಸಂಜಯ್ ದತ್ ಸಹ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಂಜಯ್ ದತ್ ಅವರ ಹುಟ್ಟುಹಬ್ಬದಂದು ಅಧೀರನ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿತ್ತು. ಕೆಜಿಎಫ್ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ್ದು, ರವೀನಾ ಟಂಡನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜಕಾರಣಿಯಾಗಿ ರವೀನಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ ಚಿತ್ರತಂಡ ಈ ಬಗ್ಗೆ ಯಾವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. .
ರವೀನಾ ಟಂಡನ್ ಸಿನಿಮಾದಲ್ಲಿ ಪ್ರಧಾನಿ ಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾದ ಟರ್ನಿಂಗ್ ಪಾಯಿಂಟ್ ನಲ್ಲಿ ರವೀನಾ ಎಂಟ್ರಿ ನೋಡುಗರಿಗೆ ಇಷ್ಟವಾಗುತ್ತೆ ಅಂತೆ. ಕೆಜಿಎಫ್ ಮೊದಲ ಭಾಗದಲ್ಲಿಯೂ ಪ್ರಧಾನ ಆಕರ್ಷಣೆಯಾಗಿದ್ದದ್ದು ತಾರಾಗಣವೇ. ಈ ಬಾರಿಯೂ ವಿಶೇಷವಾದ ಪಾತ್ರಗಳಿಗೆ ಅದಕ್ಕೆ ತಕ್ಕುದಾದ ಕಲಾವಿದರನ್ನೇ ಪ್ರಶಾಂತ್ ನೀಲ್ ಆಯ್ಕೆ ಮಾಡಿಕೊಂಡಿದ್ದಾರೆ.
ರವೀನಾ ಇಲ್ಲಿ ಎಪ್ಪತ್ತರ ದಶಕದ ಆಚೀಚಿನ ಪ್ರಧಾನ ಮಂತ್ರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮೊದಲ ಭಾಗದಲ್ಲಿ ಈ ಪಾತ್ರದ ಬಗ್ಗೆ ಒಂದು ಸುಳಿವು ನೀಡಲಾಗಿತ್ತಷ್ಟೇ. ಈ ಪಾತ್ರದ ಬಗ್ಗೆ ರವೀನಾ ಕೂಡಾ ಖುಷಿಗೊಂಡಿದ್ದಾರೆಂಬ ಮಾಹಿತಿ ಇದ್ದು ಈ ವಿಚರವಾಗಿ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಮೂಲಕ ದಶಕಗಳ ನಂತರ ರವೀನಾ ಕನ್ನಡಕ್ಕೆ ಮತ್ತೆ ಮರಳಿದಂತಾಗುತ್ತದೆ. ತೊಂಭತ್ತರ ದಶಕದಲ್ಲಿ ಉಪೇಂದ್ರ ಚಿತ್ರದಲ್ಲಿ ರವೀನಾ ಉಪ್ಪಿಗೆ ಜೋಡಿಯಾಗಿ ನಟಿಸಿದ್ದರು.