ಪ್ರತಿನಿತ್ಯ ಮಕ್ಕಳಿಗೆ, ಪತಿ ಮತ್ತು ಮನೆಯಲ್ಲಿರುವವರಿಗೆ ತಿಂಡಿ ಮಾಡಬೇಕು. ಒಂದೊಂದು ದಿನ ದೋಸೆ, ಇಡ್ಲಿ, ಚಿತ್ರನ್ನಾ, ಪುಳಿಯೊಗರೆ, ಪಲಾವ್, ಉಪ್ಪಿಟ್ಟು ಇದೇ ಮಾಡುತ್ತಿರುತ್ತೀರಾ. ಬೇರೆ ಏನಾದರೂ ಮಾಡಬೇಕು ಅಂದುಕೊಳ್ಳುತ್ತೀರಾ. ಹಾಗಾಗಿ ನಿಮಗಾಗಿ ಬಿಸಿಬಿಸಿ ರವಾ ಇಡ್ಲಿ ಮಾಡುವ ವಿಧಾನ ಇಲ್ಲಿದೆ..
Advertisement
ಬೇಕಾಗುವ ಸಾಮಾಗ್ರಿಗಳು
Advertisement
1. ರವೆ – 1 ಕಪ್
2. ಮೊಸರು – 3/4 ಕಪ್
3. ನೀರು – 3/4 ಕಪ್
4. ಗೋಡಂಬಿ – 10
5. ಸೋಡ – 1/4 ಚಮಚ
6. ಹಸಿರು ಮೆಣಸಿನ ಕಾಯಿ – 4-5
7. ಕರಿಬೇವು – ಸ್ವಲ್ಪ
8. ಕೊತ್ತಂಬರಿ ಸೊಪ್ಪು
9. ಕ್ಯಾರೆಟ್ – 1
10. ಉಪ್ಪು – ರುಚಿಗೆ ತಕ್ಕಷ್ಟು
11. ಕಡ್ಲೆ ಬೇಳೆ – 2 ಚಮಚ
12. ಉದ್ದಿನ ಬೇಳೆ – 1 ಚಮಚ
13. ಜೀರಿಗೆ – 1/4 ಚಮಚ
15. ಸಾಸಿವೆ – 1/4 ಚಮಚ
16. ಎಣ್ಣೆ – 4 ಚಮಚ (ತುಪ್ಪವನ್ನು ಬಳಸಬಹುದು)
Advertisement
Advertisement
ಮಾಡುವ ವಿಧಾನ
* ಮೊದಲು ಒಂದು ಬಾಣಲೆಗೆ 1 ಚಮಚ ತುಪ್ಪ ಹಾಕಿ ಗೋಡಂಬಿಯನ್ನು ಹುರಿದುಕೊಂಡು ಎತ್ತಿಟ್ಟುಕೊಳ್ಳಿ.
* ಅದೇ ಬಾಣಲಿಗೆ ಒಂದು ಚಮಚ ಎಣ್ಣೆ ಹಾಕಿ ರವೆಯನ್ನು ಫ್ರೈ ಮಾಡಿ. ರವೆಯ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿ, ಒಂದು ಬೌಲ್ ಗೆ ಎತ್ತಿಟ್ಟುಕೊಳ್ಳಿ. (ಸಣ್ಣ ಉರಿಯಲ್ಲಿ)
* ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಜೀರಿಗೆ ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಹಾಕಿ ಫ್ರೈ ಮಾಡಿ.
* ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ ಮತ್ತು ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿ.
* ಈಗ ಹುರಿದಿದ್ದ ರವೆ ಹಾಕಿ ಚೆನ್ನಾಗಿ ಫ್ರೈ ಮಾಡಿ, ಒಂದು ಬೌಲ್ ಗೆ ಹಾಕಿಕೊಳ್ಳಿ.
* ಹುರಿದಿರುವ ರವೆಗೆ ಮೊಸರು, ಸೋಡ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
* ಈಗ ನೀರು ಹಾಕಿ ಮಿಕ್ಸ್ ಮಾಡಿ, 15 ನಿಮಿಷ ಹಾಕಿ ಬಿಡಿ.
* ಬಳಿಕ ನೀರು ಕಡಿಮೆಯಾದರೆ ಮತ್ತೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿರಿ.(ಇಡ್ಲಿ ಹಿಟ್ಟಿನ ಹದಕ್ಕೆ ರೆಡಿ ಇರಬೇಕು)
* ಈಗ ಇಡ್ಲಿ ಪಾತ್ರೆಗೆ ಎಣ್ಣೆ ಹಚ್ಚಿ, ಒಂದು ಗೋಡಂಬಿ ಮಧ್ಯೆ ಇಟ್ಟು, ಅದರ ಮೇಲೆ ಇಡ್ಲಿ ಮಿಕ್ಸ್ ಹಾಕಿ ಬೇಯಲು ಇಡಿ.
* 15 ನಿಮಿಷ ಬೇಯಿಸಿ ನಂತರ, ಹವೆ ಹೋದ ಮೇಲೆ ತೆರೆಯಿರಿ.
* ಈಗ ಚಟ್ನಿ ಜೊತೆ ಬಿಸಿಬಿಸಿ ಇಡ್ಲಿ ತಿನ್ನಲು ರೆಡಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv