ಬ್ಯಾಚುಲರ್ಸ್ ಇದ್ದರೆ ಅವರಿಗೆ ತಿಂಡಿ, ಅಡುಗೆ ಮಾಡುವುದು ತುಂಬಾ ಕಷ್ಟ. ಹೀಗಾಗಿ ಅವರು ಸಿಂಪಲ್ ಆಗಿ ಬರುವ ಅಡುಗೆ ಮಾಡಿಕೊಂಡು ತಿನ್ನುತ್ತಾರೆ. ಆದರೆ ಪ್ರತಿದಿನ ಅದೇ ತಿಂಡಿ ತಿನ್ನಲು ಬೇಸರವಾಗುತ್ತದೆ. ಬೇರೆ ಏನಾದರೂ ಸುಲಭವಾಗಿ ಅಡುಗೆ ಮಾಡೋಣ ಎಂದರೆ ಏನು ಮಾಡುವುದು ಎಂದು ತಿಳಿದಿರುವುದಿಲ್ಲ. ಹೀಗಾಗಿ ಕೆಲವೇ ಸಾಮಾಗ್ರಿಗಳಲ್ಲಿ ದಿಡೀರ್ ಆಗಿ ರವೆ ದೋಸೆ ಮಾಡುವ ವಿಧಾನ ಇಲ್ಲಿದೆ….
Advertisement
ಬೇಕಾಗುವ ಸಾಮಾಗ್ರಿಗಳು
1. ರವೆ – 1 ಕಪ್
2. ಗಟ್ಟಿ ಮೊಸರು – 1/2 ಕಪ್
3. ಜೀರಿಗೆ – 2 ಚಮಚ
4. ಉಪ್ಪು – ರುಚಿಗೆ ತಕ್ಕಷ್ಟು
5. ಎಣ್ಣೆ
Advertisement
Advertisement
ಮಾಡುವ ವಿಧಾನ
* ಒಂದು ಮಿಕ್ಸಿಂಗ್ ಬೌಲ್‍ಗೆ ರವೆ, ಜೀರಿಗೆ, ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರು ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ.
* ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ.
* ಈಗ ದೋಸೆ ತವಾಗೆ ಮೇಲೆ ನೀರು ದೋಸೆ ಮಾಡುವ ರೀತಿ ದೋಸೆ ಉಯ್ದು ಎಣ್ಣೆ ಚುಮುಕಿಸಿ. ಲಿಡ್ ಮುಚ್ಚಿ.
* 2 ನಿಮಿಷ ಚೆನ್ನಾಗಿ ಎರಡು ಬದಿ ಬೇಯಿಸಿದರೆ ಸಿಂಪಲ್ ರವೆ ದೋಸೆ ಸವಿಯಲು ಸಿದ್ಧ.