LatestMain PostNational

ಸ್ವಾತಂತ್ರ್ಯೋತ್ಸವಕ್ಕೆ ಒತ್ತಾಯದಿಂದ ಧ್ವಜ ಮಾರಾಟ ಆರೋಪ

- ಧ್ವಜ ಖರೀದಿಸಲೇಬೇಕು, ಇಲ್ಲದಿದ್ರೆ ಪಡಿತರ ನೀಡಲ್ಲ

ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬಲವಂತವಾಗಿ ಬಡವರಿಗೆ ಧ್ವಜ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹರಿಯಾಣದ ಕರ್ನಾಲ್‍ನ ಪಡಿತರ ಡಿಪೋಗಳಲ್ಲಿ ಬಲವಂತವಾಗಿ ಧ್ವಜ ಮಾರಾಟ ಮಾಡಲಾಗ್ತಿದೆ. ಧ್ವಜ ಖರೀದಿ ಮಾಡಲೇಬೇಕು, ಇಲ್ಲ ಅಂದ್ರೆ ಈ ತಿಂಗಳ ಪಡಿತರ ನೀಡಲ್ಲ ಎಂಬ ಬೆದರಿಕೆಯನ್ನು ಹಾಕಲಾಗುತ್ತಿದೆ. ಈ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:  RSS ಕಚೇರಿಗೆ ತೆರಳಿ ರಾಷ್ಟ್ರಧ್ವಜ ನೀಡಿದ ಕಾಂಗ್ರೆಸ್ ಯುವ ಕಾರ್ಯಕರ್ತರು

ಎಐಸಿಸಿ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಬಿಜೆಪಿ ರಾಷ್ಟ್ರೀಯತೆಯನ್ನು ಮಾರಾಟ ಮಾಡುತ್ತಿದೆ. ಬಡವರ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಎಲ್ಲರಲ್ಲಿಯೂ ಅಭಿಮಾನ ಇರುತ್ತೆ. ಆದರೆ ಬಡವರ ಪಡಿತರ ಕಿತ್ಕೊಂಡು ತ್ರಿವರ್ಣ ಧ್ವಜವನ್ನು ಮಾರಾಟ ಮಾಡ್ತಿರೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತ ಡಿಕೆ ಶಿವಕುಮಾರ್ ಕೂಡ, 25 ರೂಪಾಯಿಗೆ ಬಾವುಟ ಮಾರಿ ಮನೆ ಮೇಲೆ ಹಾರಿಸಲು ಹೇಳ್ತಿರೋದು ನಾಚಿಕೆಗೇಡಿನ ವಿಚಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಕರ್ನಾಲ್ ಜಿಲ್ಲಾಡಳಿತ ಡಿಪೋ ಮಾಲೀಕನ ಪರವಾನಗಿ ರದ್ದು ಮಾಡಿ ಕ್ರಮದ ನಾಟಕವಾಗಿದೆ. ಈ ಮಧ್ಯೆ ಹುಬ್ಬಳ್ಳಿಯ RSS ಕಚೇರಿ ಕೇಶವಕುಂಜಕ್ಕೆ ತೆರಳಿದ ಕಾಂಗ್ರೆಸ್ ಮುಖಂಡರು, ಆರ್‍ಎಸ್‍ಎಸ್ ಮುಖಂಡರ ಕೈಗೆ ರಾಷ್ಟ್ರಧ್ವಜ ಕೊಟ್ಟು ಜೈಹಿಂದ್ ಎಂದು ಹೇಳಿಸಿದ್ದಾರೆ.

Live Tv

Leave a Reply

Your email address will not be published.

Back to top button