ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬಲವಂತವಾಗಿ ಬಡವರಿಗೆ ಧ್ವಜ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
आजादी की 75वीं वर्षगाँठ का उत्सव गरीबों पर ही बोझ बन जाए तो दुर्भाग्यपूर्ण होगा।
राशनकार्ड धारकों को या तिरंगा खरीदने पर मजबूर किया जा रहा है या उसके बदले उनके हिस्से का राशन काटा जा रहा है।
हर भारतीय के हृदय में बसने वाले तिरंगे की कीमत गरीब का निवाला छीन कर वसूलना शर्मनाक है। pic.twitter.com/pYKZCfGaCV
— Varun Gandhi (@varungandhi80) August 10, 2022
Advertisement
ಹರಿಯಾಣದ ಕರ್ನಾಲ್‍ನ ಪಡಿತರ ಡಿಪೋಗಳಲ್ಲಿ ಬಲವಂತವಾಗಿ ಧ್ವಜ ಮಾರಾಟ ಮಾಡಲಾಗ್ತಿದೆ. ಧ್ವಜ ಖರೀದಿ ಮಾಡಲೇಬೇಕು, ಇಲ್ಲ ಅಂದ್ರೆ ಈ ತಿಂಗಳ ಪಡಿತರ ನೀಡಲ್ಲ ಎಂಬ ಬೆದರಿಕೆಯನ್ನು ಹಾಕಲಾಗುತ್ತಿದೆ. ಈ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: RSS ಕಚೇರಿಗೆ ತೆರಳಿ ರಾಷ್ಟ್ರಧ್ವಜ ನೀಡಿದ ಕಾಂಗ್ರೆಸ್ ಯುವ ಕಾರ್ಯಕರ್ತರು
Advertisement
Advertisement
ಎಐಸಿಸಿ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಬಿಜೆಪಿ ರಾಷ್ಟ್ರೀಯತೆಯನ್ನು ಮಾರಾಟ ಮಾಡುತ್ತಿದೆ. ಬಡವರ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಎಲ್ಲರಲ್ಲಿಯೂ ಅಭಿಮಾನ ಇರುತ್ತೆ. ಆದರೆ ಬಡವರ ಪಡಿತರ ಕಿತ್ಕೊಂಡು ತ್ರಿವರ್ಣ ಧ್ವಜವನ್ನು ಮಾರಾಟ ಮಾಡ್ತಿರೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಇತ್ತ ಡಿಕೆ ಶಿವಕುಮಾರ್ ಕೂಡ, 25 ರೂಪಾಯಿಗೆ ಬಾವುಟ ಮಾರಿ ಮನೆ ಮೇಲೆ ಹಾರಿಸಲು ಹೇಳ್ತಿರೋದು ನಾಚಿಕೆಗೇಡಿನ ವಿಚಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಕರ್ನಾಲ್ ಜಿಲ್ಲಾಡಳಿತ ಡಿಪೋ ಮಾಲೀಕನ ಪರವಾನಗಿ ರದ್ದು ಮಾಡಿ ಕ್ರಮದ ನಾಟಕವಾಗಿದೆ. ಈ ಮಧ್ಯೆ ಹುಬ್ಬಳ್ಳಿಯ RSS ಕಚೇರಿ ಕೇಶವಕುಂಜಕ್ಕೆ ತೆರಳಿದ ಕಾಂಗ್ರೆಸ್ ಮುಖಂಡರು, ಆರ್‍ಎಸ್‍ಎಸ್ ಮುಖಂಡರ ಕೈಗೆ ರಾಷ್ಟ್ರಧ್ವಜ ಕೊಟ್ಟು ಜೈಹಿಂದ್ ಎಂದು ಹೇಳಿಸಿದ್ದಾರೆ.