ಕೋಲಾರ: ಬಡವರು ತಿನ್ನುವ ಪಡಿತರ ಅಕ್ಕಿಯಲ್ಲೂ ಕಲಬೆರಕಿ ಮಾಡಿರುವ ಅರೋಪ ಕೇಳಿಬಂದಿದೆ. ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಿತವಾಗಿದೆ ಎಂದು ಆರೋಪಿಸಲಾಗಿದೆ.
Advertisement
ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೀಲಗಾಣಿ ಹಾಗೂ ಊರುಕುಂಟೆ ಮಿಟ್ಟೂರು ಗ್ರಾಮದ ಪಡಿತರ ಕೇಂದ್ರದಲ್ಲಿ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಹಾಗೂ ರಬ್ಬರ್ ರೀತಿಯ ಅಕ್ಕಿ ಮಿಶ್ರಣ ಮಾಡಲಾಗಿದೆ. ಇದನ್ನೂ ಓದಿ: ತುಮಕೂರು ಲಾಡ್ಜ್‌ನಲ್ಲಿ ಸುರಂಗ- ಸುರಂಗದೊಳಗೆ ವೇಶ್ಯಾವಾಟಿಕೆ
Advertisement
Advertisement
ಸೆಪ್ಟಂಬರ್ ತಿಂಗಳಲ್ಲಿ ವಿತರಣೆ ಮಾಡಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅದಕ್ಕೆ ಪೂರಕ ಎಂಬಂತೆ ಅಕ್ಕಿಯ ಕೆಲವೊಂದು ಕಾಳುಗಳು ಸಿಕ್ಕಿದ್ದು, ಅದು ನೀರಿನಲ್ಲಿ ತೇಲುತ್ತಿದೆ. ಅಲ್ಲದೆ ಅನ್ನ ಮಾಡಲು ಇಟ್ಟರೆ ಕರಗಿ ಹೋಗುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.