ಬೆಂಗಳೂರು: ಯಾವುದೇ ಅರ್ಹರಿಗೆ ರೇಷನ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಮಾಧ್ಯಮಗಳ ಮೇಲೆಯೇ ಆರೋಪ ಮಾಡಿ ಸಿಎಂ ಸಿದ್ದರಾಮಯ್ಯ (CM Siddaramaiah) ಪುನರುಚ್ಚರಿಸಿದ್ದಾರೆ.
ರೇಷನ್ ಕಾರ್ಡ್ (Ration Card) ರದ್ದು ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರೇಷನ್ ಕಾರ್ಡ್ ವಿಚಾರದಲ್ಲಿ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ಅನರ್ಹರಿಗೆ ಮಾತ್ರ ನಾವು ಕಾರ್ಡ್ ರದ್ದು ಮಾಡೋದು. ಅರ್ಹರಿಗೆ ಯಾರಿಗೂ ತಪ್ಪಿಸುವುದಿಲ್ಲ. ಒಟ್ಟಾರೆ ಬಡವರಿಗೆ ಕೊಡಬೇಕು ಎಂದು ನನ್ನ ಹತ್ರ ಹೇಳುತ್ತೀರಿ. ಆದರೆ ಬರೆಯುವಾಗ, ತೋರಿಸುವಾಗ ಬಿಜೆಪಿ ಅವರು ಹೇಳಿದ ಹಾಗೆ ಬರೆಯುತ್ತೀರಾ? ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಜಮೀರ್ ಹೇಳಿಕೆಯನ್ನ ಸಮಾಜ ಒಪ್ಪಲ್ಲ : ಬೊಮ್ಮಾಯಿ
ಬಡವರಿಗೆ ಸಹಾಯ ಮಾಡಲು ಕಾರ್ಡ್ ಕೊಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾನು. ಬಿಜೆಪಿ ಅವರು ಅಲ್ಲ. ಬಿಜೆಪಿ, ಜೆಡಿಎಸ್ ಅವರು ಅನ್ನಭಾಗ್ಯ ಯೋಜನೆ ಕೊಟ್ಟಿಲ್ಲ. ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಮಾಡಿದ್ದು. 2017ರಲ್ಲಿ 1 ರೂ.ಗೆ ಅಕ್ಕಿ ಕೊಟ್ಟಿದ್ದು. ಆಮೇಲೆ ಉಚಿತವಾಗಿ ಕೊಟ್ಟೆ. ಇದನ್ನು ಬಿಜೆಪಿಯವರು ಮಾಡಿದ್ದಾರಾ? ಬಿಜೆಪಿ ಅವರು ಮಾತಾಡುತ್ತಾರೆ ಅಷ್ಟೆ. ಬಿಜೆಪಿ ಅಧಿಕಾರದ ಯಾವ ರಾಜ್ಯದಲ್ಲಿ ಉಚಿತ ಅಕ್ಕಿ ಕೊಟ್ಟಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಯುಪಿ, ಬಿಹಾರ, ಹರಿಯಾಣ ಬಿಜೆಪಿ ಅವರು ಕೊಟ್ಟಿದ್ದಾರಾ? ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಏಕಾಏಕಿ ರೇಷನ್ ಕಾರ್ಡ್ ರದ್ದು ಆಗುತ್ತಿಲ್ಲ. ಅರ್ಹರಿಗೆ ಕಾರ್ಡ್ ತಪ್ಪಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್