ನವದೆಹಲಿ: ಕ್ರಿಕೆಟ್ (Cricket) ಆಟಗಾರರಿಗೆ ಯಾವುದೇ ಬಹುಮಾನ ಘೋಷಣೆ ಮಾಡಿಲ್ಲ ಎಂದು ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಸ್ಪಷ್ಟನೆ ನೀಡಿದ್ದಾರೆ.
ಆಟಗಾರರಿಗೆ ಬಹುಮಾನ ಘೋಷಿಸಿಲ್ಲ. ಕ್ರಿಕೆಟ್ ಆಟಗಾರರಿಗೆ, ಐಸಿಸಿಗೆ (ICC) ಯಾವುದೇ ಸಲಹೆ ನೀಡಿಲ್ಲ. ನನಗೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ. ನನ್ನ ಅಧಿಕೃತ ಖಾತೆಗಳ ಹೊರತು ಬೇರೆ ಎಲ್ಲಿಂದಲಾದರೂ ಇಂತಹ ಸುದ್ದಿಗಳು ಬಂದರೆ ನಂಬಬೇಡಿ ಎಂದು ಎಕ್ಸ್‌ನಲ್ಲಿ ಟಾಟಾ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್ ಫ್ಯಾನ್ಸ್ – ಇಂಗ್ಲೆಂಡ್ ಆರ್ಮಿಗೆ ಭಾರತ್ ಆರ್ಮಿ ಕೌಂಟರ್
Advertisement
Advertisement
ರತನ್ ಟಾಟಾ ಅವರು ಪಾಕಿಸ್ತಾನದ ವಿರುದ್ಧ ಗೆದ್ದ ನಂತರ ಅಫ್ಘಾನಿಸ್ತಾನ ಕ್ರಿಕೆಟಿಗ ರಶೀದ್ ಖಾನ್‌ಗೆ 10 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡಿದ್ದವು. ಆದರೆ ಹೆಸರಾಂತ ಕೈಗಾರಿಕೋದ್ಯಮಿ ಈ ಹೇಳಿಕೆಗಳನ್ನು ನಿರಾಕರಿಸಿದ್ದಾರೆ.
Advertisement
Advertisement
ಅಫ್ಘಾನಿಸ್ತಾನ ಸೋಮವಾರ ವಿಶ್ವಕಪ್‌ನಲ್ಲಿ ತನ್ನ ಎರಡನೇ ಅಚ್ಚರಿಯ ವಿಜಯವನ್ನು ದಾಖಲಿಸಿತು. ಪಾಕಿಸ್ತಾನ ವಿರುದ್ಧ ಜಯ ಸಾಧಿಸಿತ್ತು. ರೆಹಮಾನುಲ್ಲಾ ಗುರ್ಬಾಜ್ (65), ಇಬ್ರಾಹಿಂ ಜದ್ರಾನ್ (87), ರಹಮತ್ ಷಾ (77) ಅಫ್ಘಾನಿಸ್ತಾನದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇದನ್ನೂ ಓದಿ: ವಿಶ್ವಕಪ್‌ನ ಟಾಪ್ 7 ತಂಡಗಳು 2025 ರ ಚಾಂಪಿಯನ್ಸ್ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್ ಎಂಟ್ರಿ
ವಿಶ್ವಕಪ್ 2023 ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಪಾಕಿಸ್ತಾನ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗಿಂತಲೂ ಅಫ್ಘಾನಿಸ್ತಾನ ತಂಡ ಉತ್ತಮ ಆಟ ಪ್ರದರ್ಶಿಸಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು (ಸೋಮವಾರ) ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ಸೆಣಸಲಿದೆ.
Web Stories