ಮುಂಬೈ: ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ರತನ್ ಟಾಟಾ (Ratan Tata) ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.
Advertisement
Advertisement
ಗಡಿಯಾರವು ಟಿಕ್ ಟಿಕ್ ಅನ್ನುವುದನ್ನು ನಿಲ್ಲಿಸಿದೆ. ಟೈಟಾನ್ ಕಣ್ಮರೆಯಾಗಿದೆ. ರತನ್ ಟಾಟಾ ಅವರು ಸಮಗ್ರತೆ, ನೈತಿಕ ನಾಯಕತ್ವ ಮತ್ತು ಲೋಕೋಪಕಾರದ ದಾರಿದೀಪವಾಗಿದ್ದರು. ಅವರು ವ್ಯಾಪಾರ ಮತ್ತು ಅದರಾಚೆಗಿನ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರು ನಮ್ಮ ನೆನಪುಗಳಲ್ಲಿ ಶಾಶ್ವತವಾಗಿ ಇರುತ್ತಾರೆ. R.I.P ಎಂದು ಗೋಯೆಂಕಾ ನೊಂದು ಬರೆದುಕೊಂಡಿದ್ದಾರೆ.
Advertisement
ರತನ್ ಟಾಟಾ ಅವರು ಡಿಸೆಂಬರ್ 28, 1937 ರಂದು ಭಾರತದ ಬಾಂಬೆಯಲ್ಲಿ ಜನಿಸಿದರು. ಕೇವಲ 10 ವರ್ಷದವನಾಗಿದ್ದಾಗ ಪೋಷಕರು ಬೇರ್ಪಟ್ಟ ನಂತರ ಅವರ ಅಜ್ಜಿಯ ಅರೈಕೆಯಲ್ಲಿ ಬೆಳೆದರು.
Advertisement
ರತನ್ ಟಾಟಾ ಅವರು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ವಾಸ್ತುಶಿಲ್ಪದಲ್ಲಿ ಪದವಿ ಪಡೆದರು. ನಂತರ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಮ್ಯಾನೆಜ್‌ಮೆಂಟ್ ಓದಿದರು. 1961 ರಲ್ಲಿ ಟಾಟಾ ಗ್ರೂಪ್‌ಗೆ ಸೇರಿದ ರತನ್ ಟಾಟಾ ಆರಂಭದಲ್ಲಿ ಕೆಳ ಹಂತದ ಕೆಲಸ ಮಾಡಿದರು. ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪನಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. 1991ರಲ್ಲಿ ರತನ್ ಟಾಟಾ ಅವರು ಟಾಟಾ ಸಮೂಹದ ಅಧ್ಯಕ್ಷರಾದರು. ಟಾಟಾ ಅವರ ನಾಯಕತ್ವದಲ್ಲಿ, ಸಮೂಹವು ಜಾಗತಿಕ ಮಾರುಕಟ್ಟೆಗಳಿಗೆ ವಿಸ್ತರಿಸಿತು.