ಗಾಂಧೀನಗರ: ಜನಪ್ರಿಯ ಪಾನೀಯ ರಸ್ನಾದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್‍ಶಾ ಖಂಬಟ್ಟಾ (Areez Pirojshaw Khambatta) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೈಗಾರಿಕೋದ್ಯಮಿ ಅರೀಜ್ ಪಿರೋಜ್‍ಶಾ ಖಂಬಟ್ಟಾ ಅವರು ನವೆಂಬರ್ 19 ರಂದು ಸೋಮವಾರ ಅಹಮದಾಬಾದ್‍ನಲ್ಲಿ (Ahmedabad) ಕೊನೆಯುಸಿರೆಳೆದಿದ್ದಾರೆ. ಅರೀಜ್ ಪಿರೋಜ್‍ಶಾ ಖಂಬಟ್ಟಾ ಅವರು, ಪತ್ನಿ ಪರ್ಸಿಸ್ ಮತ್ತು ಮಕ್ಕಳಾದ ಪಿರುಜ್, ಡೆಲ್ನಾ, ರುಜಾನ್, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
Advertisement
Advertisement
ದಶಕಗಳ ಹಿಂದೆ ಅರೀಜ್ ಪಿರೋಜ್‍ಶಾ ಖಂಬಟ್ಟಾ ಅವರ ತಂದೆ ಫಿರೋಜಾ ಖಂಬಟ್ಟಾ ಅವರು ಸಾಮಾನ್ಯ ವ್ಯಾಪಾರವನ್ನು ಪ್ರಾರಂಭಿಸಿದರು. ನಂತರ ಈ ವ್ಯಾಪಾವನ್ನು 60 ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವಕ್ಕೆ ತಂದು ಜನಪ್ರಿಯಗೊಳಿಸಿ, ವಿಶ್ವದ ಅತಿದೊಡ್ಡ ಕೇಂದ್ರೀಕೃತ ತಯಾರಕರಾಗಿ ಗುರುತಿಸಿಕೊಂಡರು. ಇದನ್ನೂ ಓದಿ: BMTCಯಿಂದ ಸಿಹಿಸುದ್ದಿ- ಶೀಘ್ರದಲ್ಲೇ ಹೋಂ ಟು ಮೆಟ್ರೋ ಸ್ಟೇಷನ್ ಮಿನಿಬಸ್
Advertisement
Advertisement
1970 ರ ದಶಕದಲ್ಲಿ ದುಬಾರಿ ವೆಚ್ಚದಲ್ಲಿ ಮಾರಾಟವಾಗುತ್ತಿದ್ದ ತಂಪು ಪಾನೀಯ ಉತ್ಪನ್ನಗಳಿಗೆ ಪರ್ಯಾಯವಾಗಿ ಕೈಗೆಟುಕುವ ದರದಲ್ಲಿ ರಸ್ನಾದ ತಂಪು ಪಾನೀಯ ಪ್ಯಾಕ್‍ಗಳನ್ನು ತಯಾರಿಸುತ್ತಿದ್ದರು. ಇದು ದೇಶದಲ್ಲಿ 1.8 ಮಿಲಿಯನ್ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಇದನ್ನೂ ಓದಿ: ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಗುರಿ- ಮಂಗಳೂರು ಸ್ಫೋಟಕ್ಕೆ ಬೆಂಗಳೂರು ಲಿಂಕ್
ಈಗ ವಿಶ್ವದ ಅತಿ ದೊಡ್ಡ ಸಾಫ್ಟ್ ಡ್ರಿಂಕ್‍ಗಳಲ್ಲಿ ಒಂದಾಗಿರುವ ರಸ್ನಾ, ಅನೇಕ ಬ್ರಾಂಡ್‍ಗಳಿಗೆ ಪೈಪೋಟಿ ನೀಡುವುದರ ಜೊತೆಗೆ ಹೆಚ್ಚಾಗಿ ಮಾರಾಟವಾಗುತ್ತಿದೆ. ಅನೇಕ ಮಂದಿ ರಸ್ನಾ ಪಾನೀಯವನ್ನು ಕುಡಿಯುವ ಮೂಲಕ ಸಾಕಷ್ಟು ಆನಂದಿಸುತ್ತಿದ್ದಾರೆ. 80 ಮತ್ತು 90ರ ದಶಕದ ಬ್ರ್ಯಾಂಡ್‍ನ “ಐ ಲವ್ ಯು ರಸ್ನಾ” ಅಭಿಯಾನವು ಇನ್ನೂ ಜನರ ಮನಸ್ಸಿನಲ್ಲಿ ಹಾಗೆಯೇ ಇದೆ.
5 ರೂಪಾಯಿಯ ರಸ್ನಾ ಪ್ಯಾಕ್‍ನಿಂದ 32 ಗ್ಲಾಸ್ ತಂಪು ಪಾನೀಯಗಳನ್ನು ತಯಾರಿಸಬಹುದು. ಪ್ರತಿ ಗ್ಲಾಸ್‍ಗೆ ಕೇವಲ 15 ಪೈಸೆ ವೆಚ್ಚವಾಗುತ್ತದೆ.