ಬೆಂಗಳೂರು: ಮಂಗಳೂರು ಆಟೋ ರಿಕ್ಷಾ ಸ್ಫೋಟ (Mangaluru Bomb Blast) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬ್ಲಾಸ್ಟ್‌ಗೆ ಬೆಂಗಳೂರಿನಿಂದಲೂ (Bengaluru) ಲಿಂಕ್ ಇದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
Advertisement
ಶಾರೀಕ್ ಸಂಪರ್ಕಿತ ರುಹುಲ್ಲಾ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಕೆಜಿ ಹಳ್ಳಿ ಸಮೀಪ ರುಹಲ್ಲಾ ಮೊಬೈಲ್ ಲೋಕೇಷನ್ ಪತ್ತೆಯಾಗಿದೆ. ಅಲ್ಲಿಗೆ ಭೇಟಿ ನೀಡಿ, ತನಿಖೆ ನಡೆಸಿದ ಪೊಲೀಸರು (Police) ಮೊಬೈಲ್ (Mobile), ಲ್ಯಾಪ್‌ಟಾಪ್ (Laptop) ಪರಿಶೀಲಿಸಿದಾಗ ಶಾರೀಕ್ ಜೊತೆ ರುಹುಲ್ಲಾ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಬಳಿಕ ಶಂಕಿತ ರುಹಲ್ಲಾನನ್ನು ಮೈಸೂರು ಪೊಲೀಸರು (Mysuru Police) ಬಂಧಿಸಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ – 162 ಮಂದಿ ಸಾವು, 700ಕ್ಕೂ ಅಧಿಕ ಮಂದಿಗೆ ಗಾಯ
Advertisement
Advertisement
ಆತ್ಮಾಹುತಿ ಬಾಂಬ್ ಹಿಂದಿನ ರಹಸ್ಯ ಬಯಲು: ಶಾರಿಕ್ ತನ್ನ ಸ್ನೇಹಿತ ಮಾಝ್ ಬಂಧನ ಸಹಿಸದ ಪ್ರತೀಕಾರಕ್ಕೆ ಇಳಿದು, ಬಾಂಬ್ ಸ್ಫೋಟಿಸಲು ಮುಂದಾಗಿದ್ದ. ಗುರು ಯಾಸೀನ್, ಸ್ನೇಹಿತ ಮಾಝ್ ಬಂಧನದ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದ. ಅಲ್ಲದೇ, ಈ ಮೂವರು ಭಾರತವನ್ನು ಇಸ್ಲಾಂ ರಾಷ್ಟ್ರವಾಗಿ ಮಾಡುವ ಗುರಿ ಹೊಂದಿದ್ದರು ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿ ಅರೆಸ್ಟ್
Advertisement
ಲಕ್ಷ-ಲಕ್ಷ ಹಣ: ಬಾಂಬ್ ಬ್ಲಾಸ್ಟ್ (Bomb Blast) ಪ್ರಕರಣದ ಬಳಿಕ ಶಾರಿಕ್ ಸಹೋದರಿಯರ ಖಾತೆಗೆ ಲಕ್ಷ- ಲಕ್ಷ ಹಣ ಹರಿದುಬಂದಿದೆ ಎಂದು ಹೇಳಲಾಗುತ್ತಿದೆ. ಇಷ್ಟೊಂದು ಹಣ ಶಾರೀಕ್‌ಗೆ ಬರುತ್ತಿದ್ದಿದ್ದು ಎಲ್ಲಿಂದ? ಭಾರತವನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಫಂಡಿಂಗ್ ಮಾಡ್ತಿದ್ದಾರಾ? ಶಾರಿಕ್‌ಗೂ ವಿದೇಶದಿಂದಲೇ ಫಂಡಿಂಗ್ ಮಾಡಲಾಗುತ್ತಿತ್ತು ಅನ್ನೋ ಅನುಮಾನ ವ್ಯಕ್ತವಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.