ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್. ಆದರೆ ರಶ್ಮಿಕಾ ಪಾಲಿಗೆ ಇದು ಅದೃಷ್ಟ ಪರೀಕ್ಷೆ. ಈ ವರ್ಷಾಂತ್ಯದಲ್ಲಿ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್ ಆಗ್ತಿದೆ. ತೆಲುಗು ಸಿನಿಮಾ ಮುಂದೆ ಬಾಲಿವುಡ್ ಚಿತ್ರ ಪೈಪೋಟಿ ಕೊಡ್ತಿದೆ. ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ಶ್ರೀಲೀಲಾ ಹೇಳಿದ್ದೇನು?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಶ್ರೀವಲ್ಲಿ ಅಭಿಮಾನಿಗಳಿಗೆ ಸಂತಸಪಡುವ ವಿಷ್ಯ ಸಿಕ್ಕಿದೆ. ರಶ್ಮಿಕಾ ಹೀರೋಯಿನ್ ಆಗಿ ನಟಿಸಿರುವ ‘ಪುಷ್ಪ 2’ (Pushpa 2) ಮತ್ತು ‘ಚಾವಾ’ (Chhava) ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ.
ಆಗಸ್ಟ್ 15ರಂದು ಬಿಡುಗಡೆಯಾಗಬೇಕಿದ್ದ ‘ಪುಷ್ಪ 2’ ಸಿನಿಮಾ ಇದೀಗ ಡಿಸೆಂಬರ್ 6ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅದೇ ದಿನ ವಿಕ್ಕಿ ಕೌಶಲ್ (Vicky Kaushal), ರಶ್ಮಿಕಾ ನಟನೆಯ ಚಾವಾ ಕೂಡ ರಿಲೀಸ್ ಆಗ್ತಿದೆ. ರಶ್ಮಿಕಾ ವರ್ಸಸ್ ರಶ್ಮಿಕಾ ಸಿನಿಮಾನೇ ಪೈಪೋಟಿಗಿಳಿದಿದೆ. ರಿಲೀಸ್ ಬಳಿಕ ಎರಡು ಸಿನಿಮಾ ಭವಿಷ್ಯ ನಿರ್ಧಾರವಾಗಲಿದೆ.
ಇನ್ನೂ ಅನಿಮಲ್ ಪಾರ್ಕ್, ಕುಬೇರ, ಸಿಖಂದರ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಪುಷ್ಪ 2, ಚಾವಾ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.