ಎಲ್ಲಿ ನೋಡಿದರೂ ರಶ್ಮಿಕಾ ಮಂದಣ್ಣ ಮೇನಿಯಾ. ಸೌತ್ ಟು ನಾರ್ತ್ವರೆಗೂ ರಶ್ಮಿಕಾದೇ ಹವಾ. ಸೂಪರ್ ಸ್ಟಾರ್ ದಳಪತಿ ವಿಜಯ್ಗೆ ಜೋಡಿಯಾಗುವ ಮೂಲಕ ರಶ್ಮಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ದಳಪತಿ ವಿಜಯ್ ನಟನೆಯ 66ನೇ ಚಿತ್ರಕ್ಕೆ ಕನ್ನಡತಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಫಸ್ಟ್ ಟೈಮ್ ದಳಪತಿ ವಿಜಯ್ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ಕೂಡ ದಳಪತಿ ವಿಜಯ್ ಅವರ ಅಭಿಮಾನಿಯಾಗಿದ್ದು, ಇದೇ ಖುಷಿಯಲ್ಲಿ ಹೊಸ ಚಿತ್ರದ ಮುಹೂರ್ತದ ವೇಳೆ ರಶ್ಮಿಕಾ ಖುಷಿ ಖುಷಿಯಾಗಿ ಲಟಿಕೆ ಮುರಿದು ವಿಜಯ್ಗೆ ದೃಷ್ಠಿ ತೆಗೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
`ಪುಷ್ಪ’ ಸಕ್ಸಸ್ ನಂತರ ಡೈರೆಕ್ಟರ್ ವಂಶಿ ಪಡಿಪಲ್ಲಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದಳಪತಿ ವಿಜಯ್ ನಟನೆಯ ೬೬ನೇ ಚಿತ್ರ ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ. ವಿಜಯ್ ಮತ್ತು ರಶ್ಮಿಕಾ ಕಾಂಬಿನೇಷನ್ನ ಚಿತ್ರ ಗ್ರ್ಯಾಂಡ್ ಮುಹೂರ್ತ ನೆರೆವೇರಿದೆ. ವಿಜಯ್ ನಟನೆಯ `ಬಿಗಿಲ್’, `ಸರ್ಕಾರ್’ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಹಿಟ್ ಆಗಿದೆ. ಈಗ ನಿರ್ದೇಶಕ ವಂಶಿ ಪಡಿಪಲ್ಲಿ ವಿಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ:ಜಗ್ಗೇಶ್ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್’
Advertisement
Advertisement
ವಿಭಿನ್ನ ಕಟೆಂಟ್ ಮೂಲಕ ಬರುತ್ತಿರೋ ದಳಪತಿ ವಿಜಯ್ ಮತ್ತು `ಪುಷ್ಪ’ ಕ್ವೀನ್ ನಯಾ ಜೋಡಿಯನ್ನು ತೆರೆಯ ಮೇಲೆ ನೋಡಲು ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಒಟ್ಟಿನಲ್ಲಿ ವೈರಲ್ ಆಗ್ತಿರೋ ಫೋಟೋಸ್ ಜೊತೆ ನೆಚ್ಚಿನ ನಟಿಯ ಖುಷಿ, ಯಶಸ್ಸು ನೋಡಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.