ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಪುಷ್ಪಾ 2 ಸಿನಿಮಾದ ಬಗ್ಗೆ ದಿನಕ್ಕೊಂದು ಅಪ್ ಡೇಟ್ ಬರುತ್ತಿದೆ. ಮೊನ್ನೆಯಷ್ಟೇ ಈ ಸಿನಿಮಾದ ಕಥೆಯನ್ನು ಬದಲಾಯಿಸುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ ಎನ್ನುವ ಮಾತು ಇತ್ತು. ನಂತರದ ದಿನಗಳಲ್ಲಿ ಪಾತ್ರಗಳು ಬದಲಾವಣೆ ಆಗುತ್ತಿವೆ ಎಂದು ಹೇಳಲಾಗಿತ್ತು. ಈ ಸಲ ಡಾಲಿ ಧನಂಜಯ್ ಪಾತ್ರವನ್ನು ಹಿಗ್ಗಿಸುತ್ತಿರುವ ಮತ್ತು ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಕತ್ತರಿ ಬೀಳಲಿದೆ ಎಂದೂ ಸುದ್ದಿ ಆಗಿತ್ತು.
ಇತ್ತೀಚಿಗೆ ಬಂದ ಸುದ್ದಿ ಏನೆಂದರೆ, ರಶ್ಮಿಕಾ ಮಂದಣ್ಣ ಪಾತ್ರ ಕೊನೆಯಲ್ಲಿ ಸಾಯುತ್ತದೆ ಎಂದು ಸುದ್ದಿ ಆಗಿತ್ತು. ಈ ಕುರಿತು ನಿರ್ಮಾಪಕ ವೈ.ರವಿಶಂಕರ್ ಗರಂ ಆಗಿದ್ದು, ಇಂತಹ ನಾನ್ಸೆನ್ಸ್ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಬರುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ಗಾಸಿಪ್ ಗಳನ್ನು ನಂಬಬೇಡಿ. ಊಹಾಪೋಹ ಸುದ್ದಿಗಳನ್ನು ನಂಬಬೇಡಿ ಎಂದು ಅವರು ಹೇಳಿದ್ದಾರೆ. ಏನೇ ವಿಷಯವಿದ್ದರೂ ಅಧಿಕೃತವಾಗಿ ಸಿನಿಮಾ ತಂಡವೇ ಹೇಳುತ್ತದೆ ಎಂದೂ ಅವರು ತಿಳಿಸಿದ್ದಾರೆ ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ
ಕಥೆಯನ್ನು ಮತ್ತೊಂದು ಲೇವೆಲ್ ಗೆ ತಗೆದುಕೊಂಡು ಹೋಗಿದ್ದು ನಿಜ ಎನ್ನಲಾಗುತ್ತಿದೆ. ರಕ್ತಚಂದನದ ಕಥೆಯು ಸದ್ಯ ಸ್ವದೇಶದಲ್ಲಿ ನಡೆಯುತ್ತಿದೆ. ಅದನ್ನು ವಿದೇಶಕ್ಕೂ ವಿಸ್ತರಿಸುವ ಕಥಾ ನಾಯಕ ಪುಷ್ಪ 2 ದಲ್ಲಿ ಇರಲಿದ್ದಾನೆ ಎನ್ನಲಾಗುತ್ತಿದೆ. ಹಾಗಾಗಿ ಈ ಬಾರಿ ಪುಷ್ಪಾ ಸಿನಿಮಾದ ಶೂಟಿಂಗ್ ವಿದೇಶದಲ್ಲೂ ನಡೆಯಲಿದೆಯಂತೆ.