ಸೌತ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಸುದ್ದಿಯಲ್ಲಿರುವ ನಾಯಕಿ. ಸಿನಿಮಾ ಜೊತೆ ವೈಯಕ್ತಿಕ ವಿಚಾರವಾಗಿಯೂ ಆಗಾಗ ಕೊಡಗಿನ ಕುವರಿ ಸೌಂಡ್ ಮಾಡುತ್ತಾರೆ. ಇದೀಗ 2 ಲಕ್ಷ ರೂಪಾಯಿಯ ಬೆಲೆ ಬಾಳವ ಟಾಪ್ ಧರಿಸಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಟಾಪ್ ಬೆಲೆ ಕೇಳಿ ನೆಟ್ಟಿಗರು ಸಖತ್ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮದುವೆಯಾದ ಸಂಭ್ರಮದಲ್ಲಿ ಪತ್ನಿಗೆ ಕಿಯಾರಾ ಮುತ್ತಿಟ್ಟ ಸಿದ್ಧಾರ್ಥ್
Advertisement
ಕನ್ನಡತಿ ರಶ್ಮಿಕಾ ಮಂದಣ್ಣ ಸೌತ್ ಮತ್ತು ಬಾಲಿವುಡ್ನಲ್ಲಿ (Bollywood) ಮಿರ ಮಿರ ಅಂತಾ ಮಿಂಚ್ತಿರುವ ನಟಿ. ಸೂಪರ್ ಸ್ಟಾರ್ಗಳ ಜೊತೆಗೆ ತೆರೆ ಹಂಚಿಕೊಳ್ಳುವ ಮೂಲಕ ಛಾಪು ಮೂಡಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Advertisement
View this post on Instagram
Advertisement
ಸದ್ಯ ನಟಿಯ 2 ಲಕ್ಷದ ಟಾಪ್ ವಿಚಾರವಾಗಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ಹೈದರಾಬಾದ್ನಿಂದ ಬೆಂಗಳೂರಿಗೆ ಪ್ರಯಾಣ ಮಾಡುವಾಗ ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. 2.06 ಲಕ್ಷ ರೂ. ಸಿಂಪಲ್ ಆಗಿರುವ ಟಾಪ್ ಧರಿಸಿ ಎಂಟ್ರಿ ಕೊಟ್ಟಿದ್ದಾರೆ. ನಟಿ ಧರಿಸಿರುವ Dolce & Gabbana ಹೆಸರಿನ ಪೀಚ್ ಬಣ್ಣದ ಟಾಪ್ 2 ಲಕ್ಷದ 6 ಸಾವಿರದ 336 ರೂಪಾಯಿ ಎನ್ನಲಾಗಿದೆ. ಇದರ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
Advertisement
View this post on Instagram
ಪೀಚ್ ಬಣ್ಣದ ಟಾಪ್, ನೀಲಿ ಬಣ್ಣದ ಪ್ಯಾಂಟ್ ಧರಿಸಿ ಬಂದ ರಶ್ಮಿಕಾ, ಬಟ್ಟೆಯ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ನೆಲ ಒರೆಸುವ ಬಟ್ಟೆಯ ಹಾಗೆಯಿದೆ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ನಟಿಯ ದುಬಾರಿ ಬೆಲೆಯ ಡ್ರೆಸ್ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k