ಭಾವಿ ಪತಿಯ ಹುಟ್ಟುಹಬ್ಬಕ್ಕೆ ನಟಿ ರಶ್ಮಿಕಾ ಮಂದಣ್ಣ ಪ್ರೀತಿಯಿಂದ ವಿಶ್ ಮಾಡಿದ್ದು ಹೀಗೆ

Public TV
1 Min Read
RAKSHITH MANDANNA

ಬೆಂಗಳೂರು: ಅಂತೂ ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಲವ್ ಗಾಸಿಪ್ ಗಳು ನಿಜವಾಗಿದ್ದು, ಇದೀಗ ಮದುವೆ ಆಗೋದು ಕೂಡ ಪಕ್ಕಾ ಆಗಿದೆ. ರಶ್ಮಿಕಾ ಮಂದಣ್ಣ ಇಂದು ತಮ್ಮ ಭಾವಿ ಪತಿ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಪ್ರೀತಿಯಿಂದಲೇ ಶುಭಾಶಯ ಕೋರಿದ್ದಾರೆ.

`ನಾನು ಕಂಡಂತಹ ಅತ್ಯಂತ ಸರಳ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ. ನೀವು ಪ್ರಯತ್ನ ಪಡದೆಯೇ ನಿಮ್ಮನ್ನು ಜನ ಇಷ್ಟ ಪಡುತ್ತಾರೆ. ಅದರಲ್ಲಿ ನಮ್ಮ ಪೋಷಕರು ಕೂಡ ಒಬ್ಬರು. ನಮ್ಮ ಚಿಕ್ಕ ಕುಟುಂಬಕ್ಕೆ ಸ್ವಾಗತ ಅಂತಾ ರಶ್ಮಿಕಾ ಅವರು ಫೇಸ್‍ಬುಕ್‍ನಲ್ಲಿ ರಕ್ಷಿತ್ ಶೆಟ್ಟಿಗೆ ವಿಶ್ ಮಾಡಿದ್ದಾರೆ.

ರಶ್ಮಿಕಾ ತಂದೆಯೂ ತಮ್ಮ ಭಾವಿ ಅಳಿಯನಿಗೆ ಪ್ರೀತಿಯ ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೈಗೆ ಬಂಗಾರದ ಖಡಗ ತೊಡಿಸುವ ಮೂಲಕ ವೆಲ್ ಕಮ್ ಟು ಅವರ್ ಫ್ಯಾಮಿ ಅಂತಾ ಹೇಳಿದ್ದಾರೆ.

RAKSHIT

ಜುಲೈ 3ರಂದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನಡೆಯಲಿದೆ. ಕುಶಾಲನಗರದಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಎರಡೂ ಕುಟುಂಬದದ ಸದಸ್ಯರು ಮತ್ತು ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ಕರ್ಣ ಮತ್ತು ಸಾನ್ವಿಯಾಗಿ ನಟಿಸಿದ್ದ ಈ ಜೋಡಿಯ ನಿಶ್ಚಿತಾರ್ಥ ಜುಲೈನಲ್ಲಿ ನಡೆಯಲಿದ್ದು, ಮದುವೆ ದಿನಾಂಕ ಇನ್ನು ಅಂತಿಮವಾಗಿಲ್ಲ. ಮದುವೆ ಉಡುಪಿಯಲ್ಲಿ ನಡೆದರೆ ಬೆಂಗಳೂರಲ್ಲಿ ಅರತಕ್ಷತೆ ನಡೆಯಲಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.

rashmika mandanna jpg

ರಕ್ಷಿತ್ ಶೆಟ್ಟಿ ಈಗ `ಅವನೇ ಶ್ರೀಮನ್ನನಾರಾಯಣ’ ಸಿನಿಮಾದಲ್ಲಿ ತೊಡಗಿದ್ದು, ಇದಾದ ಬಳಿಕ ಸುದೀಪ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ರಕ್ಷಿತ್ ಅವರೇ ಬರೆದ ಕಥೆಯಾಧರಿತ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿ ಲೋಕಕ್ಕೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರದಲ್ಲೇ ಮೆಚ್ಚುಗೆ ಪಡೆದ ಇವರು ಈಗ ಸುನಿ ನಿರ್ದೇಶನದ `ಚಮಕ್’ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರೆ. ತಮ್ಮ ಚಿತ್ರದಲ್ಲಿ ಅವಕಾಶ ನೀಡಿದ ಹುಡುಗಿಯನ್ನೇ ಮದುವೆಯಾಗುವ ಮೂಲಕ ರಕ್ಷಿತ್ ಶೆಟ್ಟಿ ಚಿತ್ರರಂಗದ ಜೋಡಿಗಳ ಸಾಲಿಗೆ ಸೇರುತ್ತಿದ್ದಾರೆ.

kirik party pair 5

kirik party pair 3

kirik party pair 2

kirik party pair 4

kirik party pair 6

Kirik Party

Share This Article
Leave a Comment

Leave a Reply

Your email address will not be published. Required fields are marked *